Advertisement

ಟೀಮ್‌ ಇಂಡಿಯಾ ಕ್ರಿಕೆಟಿಗರಿಗೆ ನೂತನ ಜೆರ್ಸಿ

12:35 AM May 29, 2021 | Team Udayavani |

ಮುಂಬಯಿ : ನ್ಯೂಜಿಲ್ಯಾಂಡ್‌ ವಿರುದ್ಧ ಜೂನ್‌ 18ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ನಡೆಸುವ ಅಭ್ಯಾಸದ ವೇಳೆ ಭಾರತದ ಆಟಗಾರರು ನೂತನ ಜೆರ್ಸಿಯಲ್ಲಿ ಮಿಂಚಲಿದ್ದಾರೆ. ಈ ಹೊಸ ಜೆರ್ಸಿಯನ್ನು ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

ಸದ್ಯ ಭಾರತೀಯ ಟೀಮ್‌ ಇಂಡಿಯಾ ಮುಂಬಯಿಯ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದೆ. ಈ ನಡುವೆ ಅಗರ್ವಾಲ್‌ ತಿಳಿನೀಲಿ ಮತ್ತು ಕಡುನೀಲಿ ಬಣ್ಣದ ನೂತನ ಜೆರ್ಸಿ ತೊಟ್ಟ ತಮ್ಮ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ :ಅಂತಿಮ ಏಕದಿನ ಪಂದ್ಯ : ಬಾಂಗ್ಲಾ ವಿರುದ್ಧ ಲಂಕೆಗೆ ಸಮಾಧಾನಕರ ಗೆಲುವು

ಈ ಜೆರ್ಸಿಯಲ್ಲಿ ಬಿಸಿಸಿಐ ಲೋಗೊ ಜತೆಗೆ ಪ್ರಾಯೋಜಕರಾದ ಬೈಜುಸ್‌ ಮತ್ತು ಎಂಪಿಎಲ್‌ ಲೋಗೊ ಕೂಡ ಇದೆ. “ಸಿದ್ಧತೆಯೂ ಬರದಿಂದ ಸಾಗುತ್ತಿದೆ, ಕಾತರವೂ ಹೆಚ್ಚಾಗುತ್ತಿದೆ’ ಎಂಬ ಅಡಿಬರಹದೊಂದಿಗೆ ಅಗರ್ವಾಲ್‌ ತಮ್ಮ ಪೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next