ನವಿ ಮುಂಬಯಿ: ನೆರೂಲ್ ಸೆಕ್ಟರ್-11ರ, ಪ್ಲಾಟ್ ನಂಬರ್ 22-ಎ ಯಲ್ಲಿರುವ ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಶ್ರೀ ಮಹಾಗಣಪತಿ, ಶ್ರೀ ಹನುಮಾನ್, ಶ್ರೀ ಶನೀಶ್ವರ ದೇವರ ರಥೋತ್ಸವ ಹಾಗೂ 27 ನೇ ವಾರ್ಷಿಕೋತ್ಸವ ಸಂಭ್ರಮವು ಫೆ. 11 ರಂದು ಪ್ರಾರಂಭಗೊಂಡಿದ್ದು, ಫೆ. 15 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಕಳತ್ತೂರು ಶ್ರೀ ಉದಯ ತಂತ್ರಿವರ್ಯರ ಪೌರೋಹಿತ್ಯದಲ್ಲಿ ಜರಗುತ್ತಿರುವ ಧಾರ್ಮಿಕ ಉತ್ಸವದಲ್ಲಿ ಮಂದಿರದ ಪ್ರಧಾನ ಅರ್ಚಕ ಸೂರಜ್ ಭಟ್ ಅವರ ಉಪಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಫೆ. 14 ರಂದು ಮುಂಜಾನೆ 6 ರಿಂದ ಕವಾಟೋದ್ಘಾಟನೆ, ನವಕ ಪ್ರಧಾನ ಹವನ, ಪೂರ್ವಾಹ್ನ 11 ರಿಂದ ಮಹಾಪೂಜೆ, ಉತ್ಸವ ಬಲಿ, ರಥಾರೋಹಣ, ಪಲ್ಲಪೂಜೆ, ಮಧ್ಯಾಹ್ನ 12.45 ರಿಂದ ನೃತ್ಯ ವೈಭವ, ಮಧ್ಯಾಹ್ನ 1.30 ರಿಂದ ಧಾರ್ಮಿಕ ಸಭೆ, ಅಪರಾಹ್ನ 2.30 ರಿಂದ ಶ್ರೀ ರವಿಶಂಕರ ಆಚಾರ್ಯರ ಸಂಯೋಜನೆಯಲ್ಲಿ ಭಕ್ತಿ ರಸಮಂಜರಿ, ಅಪರಾಹ್ನ 4.20 ರಿಂದ ಮೀನಾಕ್ಷೀ ಶ್ರೀಯಾನ್ ತಂಡದವರಿಂದ ನೃತ್ಯ ರೂಪಕ, ಸಂಜೆ 5.30 ರಿಂದ ಹುಲಿ ಕುಣಿತ, ಸಂಜೆ 6 ರಿಂದ ಬಲಿ, ರಥೋತ್ಸವ, ಕಟ್ಟೆಪೂಜೆ, ಓಕುಲಿ ಸ್ನಾನ, ಜಲಕ ಬಲಿ, ಮಂಗಳಾರತಿ, ಅನ್ನಪ್ರಸಾದ ಜರಗಿತು.
ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಜತೆ ಕಾರ್ಯದರ್ಶಿ ಜಯಕರ ಬಿ. ಪೂಜಾರಿ, ಜತೆ ಕೋಶಾಧಿಕಾರಿ ಕರುಣಾಕರ ಎಸ್. ಆಳ್ವ, ವಿಶ್ವಸ್ಥರುಗಳಾದ ಎನ್. ಡಿ. ಶೆಣೈ, ಪುನೀತ್‌ಕುಮಾರ್ ಆರ್. ಶೆಟ್ಟಿ, ಪ್ರಭಾಕರ ಎಸ್. ಹೆಗ್ಡೆ, ಅನಿಲ್ ಕೆ. ಹೆಗ್ಡೆ, ಕೃಷ್ಣ ಎಂ. ಪೂಜಾರಿ, ದಾಮೋದರ ಶೆಟ್ಟಿ, ದಯಾನಂದ ಶೆಟ್ಟಿ ಹಾಗೂ ತಾರನಾಥ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರುಗಳಾದ ಪ್ರಕಾಶ್ ಭಂಡಾರಿ, ಕೆ. ಡಿ. ಶೆಟ್ಟಿ, ಸದಾನಂದ ಡಿ. ಶೆಟ್ಟಿ, ಎನ್. ಕೆ. ಪೂಜಾರಿ, ಜಯರಾಮ ಪೂಜಾರಿ, ಕೃಷ್ಣ ಐ. ಕೋಟ್ಯಾನ್, ಭಜನಾ ಮಂಡಳಿಯ ಅಧ್ಯಕ್ಷ ಶೇಖರ ಬಿ. ಪಾಲನ್, ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ವಿ. ಪೂಜಾರಿ, ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು. ಭಕ್ತಾದಿಗಳು, ತುಳು-ಕನ್ನಡಿಗರು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಉತ್ಸವದ ಅಂಗವಾಗಿ ಫೆ. 11 ರಂದು ಬೆಳಗ್ಗೆ 9 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ದ್ವಾದಶ ನಾಳಿಕೇರ ಗಣಯಾಗ, ಮುಖ್ಯಪ್ರಾಣ ದೇವರಿಗೆ ನವಕ ಪ್ರಧಾನ ಹವನ, ಮಧ್ಯಾಹ್ನ 2 ರಿಂದ ಸಂಪೂರ್ಣ ಶ್ರೀ ಶನೀಶ್ವರ ಮಹಾತೆ¾ ಗ್ರಂಥ ಪಾರಾಯಣ, ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ಫೆ. 12 ರಂದು ಬೆಳಗ್ಗೆ 9 ರಿಂದ ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ ಹವನ, ಶ್ರೀ ಶನೀಶ್ವರ ದೇವರಿಗೆ ನವಕ ಪ್ರಧಾನ ಹವನ, ರಾತ್ರಿ 8 ರಿಂದ ರಂಗಪೂಜೆ, ಮಹಾಗಣಪತಿ ಹಾಗೂ ವೀರಾಂಜನೇಯ ಸ್ವಾಮಿಗೆ ಬಲಿ ಉತ್ಸವ ನಡೆಯಿತು. ಫೆ. 13 ರಂದು ಬೆಳಗ್ಗೆ 9 ರಿಂದ ಶ್ರೀ ಮುಖ್ಯಪ್ರಾಣ ಸ್ವಾಮಿಗೆ ವಾಯುಸ್ತುತಿ ಪುರಶ್ಚರಣ ಹವನ, ಸಗ್ರಹಮಕ ಶನಿಶಾಂತಿ ಹವನ, ಅಪರಾಹ್ನ ಶ್ರೀ ಸತ್ಯನಾರಾಯಣ ಮಹಾಪೂಜೆ, ರಾತ್ರಿ 8 ರಿಂದ ಬಲಿ ಉತ್ಸವ, ಕವಾಟ ಬಂಧನ ಜರಗಿತು.
ವಿವಿಧ ಕಾರ್ಯಕ್ರಮ
ಫೆ. 15 ರಂದು ಬೆಳಗ್ಗೆ 9 ರಿಂದ ನವಕ ಪ್ರಧಾನ ಹವನ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ತೀರ್ಥ ಪ್ರಸಾದ, ಅಪರಾಹ್ನ 4.30ರಿಂದ ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಕಲಾವಿದರಿಂದ ಸತೀಶ್ ಎರ್ಮಾಳ್ ರಚಿಸಿ, ಅನಿಲ್ ಕುಮಾರ್ ಹೆಗ್ಡೆ ನಿರ್ದೇಶಿಸಿರುವ ಬುಡುª ಪೋವೊಡಿc ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಚಿತ್ರ-ವರದಿ : ಸುಭಾಶ್ ಶಿರಿಯಾ