Advertisement

Madikeri: ದೇವಾಲಯದ ಹುಂಡಿ ಕಳ್ಳತನಕ್ಕೆ ಯತ್ನ

07:25 PM Jan 04, 2025 | Team Udayavani |

ಮಡಿಕೇರಿ: ದೇವಾಲಯದ ಕಾಣಿಕೆ ಹುಂಡಿ ಕಳ್ಳತನ ಮಾಡಲು ಯತ್ನಿಸಿದ ಪ್ರಕರಣ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಶ್ರೀಮುತ್ತಪ್ಪ ಹಾಗೂ ಐಶ್ವರ್ಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ.

Advertisement

ಶುಕ್ರವಾರ (ಜ.3 ರಂದು)  ಮಧ್ಯರಾತ್ರಿ ಸುಮಾರು 1.45 ಗಂಟೆ ವೇಳೆ ದೇವಾಲಯದ ಆವರಣಕ್ಕೆ ಬಂದ ಚೋರರು ಹುಂಡಿಯನ್ನು ಕದ್ದು ಹೊರಗೆ ಬಂದಿದ್ದಾರೆ. ಈ ಸಂದರ್ಭ ನಾಯಿಗಳು ಬೊಗಳಿದ್ದು, ಅಕ್ಕಪಕ್ಕದ ಮನೆಯವರು ಹೊರ ಬಂದಿದ್ದಾರೆ. ಆತಂಕಗೊಂಡ ಕಳ್ಳರು ಕಾಣಿಕೆ ಹುಂಡಿಯನ್ನು ಅಲ್ಲೇ ಬಿಟ್ಟು ಪಕ್ಕದ ಕಾಡಿನೊಳಗೆ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಸೇರಿ ಹುಡುಕಾಡಿದರೂ ಪರಾರಿಯಾದವರು ಪತ್ತೆಯಾಗಲಿಲ್ಲ.

ದೇವಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಹಿನ್ನೆಲೆ ಸಿದ್ದಾಪುರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೋರರ ಪತ್ತೆಗೆ ತನಿಖೆ ಮುಂದುವರೆದಿದೆ. ಮಾಲ್ದಾರೆ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next