ರಾಜಾಮಂಡ್ರಿ : ಜವಹಾರ್ ಲಾಲ್ ನೆಹರು ಅವರ ಬದಲಾಗಿ ಸರ್ದಾರ್ ಪಟೇಲ್ ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದರೆ ಕಾಶ್ಮೀರ ವಿವಾದಕ್ಕೆ ಆಸ್ಪದ ದೊರಕುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುರುವಾರ ಕಿಡಿ ಕಾರಿದ್ದಾರೆ.
ಪುಲ್ವಾಮಾ ದಾಳಿಯ ಕುರಿತಾಗಿ ಮಾತನಾಡಿದ ಶಾ, ಪಾಕಿಸ್ಥಾನ ಕಾಶ್ಮೀರಕ್ಕಾಗಿ ಉಗ್ರವಾದವನ್ನು ಮಾಡುತ್ತಿದೆ. ಈ ಸಮಸ್ಯೆಗೆ ಯಾರಾದರೂ ಜವಾಬ್ಧಾರಾಗಿದ್ದರೆ ಅದು ನೆಹರು. ಸರ್ದಾರ್ ಪಟೇಲ್ ಅವರು ಅಂದು ಪ್ರಧಾನಿಯಾಗಿರುತ್ತಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.
ಇಡೀ ದೇಶವೇ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಪರವಾಗಿ ನಿಂತಿದ್ದರೆ, ವಿಪಕ್ಷ ಕಾಂಗ್ರೆಸ್ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.
ಪ್ರಧಾನಿ ಪುಲ್ವಮಾ ದಾಳಿ ಬಳಿಕ ಶೂಟಿಂಗ್‌ನಲ್ಲಿ ನಿರತರಾಗಿದ್ದರು ಎಂದು ಆರೋಪಿಸಿದೆ. ಕಾಂಗ್ರೆಸ್ ಎಷ್ಟು ಆರೋಪ ಮಾಡುತ್ತದೆಯೋ ಅಷ್ಟು ಮಾಡಲಿ ನಾವದನ್ನು ಸ್ವಾಗತಿಸುತ್ತೇವೆ ಎಂದು ಕಿಡಿ ಕಾರಿದರು.
ಪ್ರಧಾನಿ ಮೋದಿ ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅವರು ದಾಳಿಗೆ ಪ್ರತೀಕಾರ ನೀಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದರು.