Advertisement

NEET paper leak:: ಪಾಟ್ನಾದಲ್ಲಿ ಸಿಬಿಐನಿಂದ ಇಬ್ಬರ ಸೆರೆ

10:02 PM Jul 09, 2024 | Team Udayavani |

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಅಭ್ಯರ್ಥಿ ಸೇರಿದಂತೆ ಇಬ್ಬರನ್ನು ಸಿಬಿಐ ಮಂಗಳವಾರ ಪಾಟ್ನಾದಲ್ಲಿ ಬಂಧಿಸಿದೆ. ತನ್ಮೂಲಕ ಈ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Advertisement

ನೀಟ್‌ ಅಭ್ಯರ್ಥಿ ನಳಂದಾದ ಸನ್ನಿ ಹಾಗೂ ಗಯಾದ ಅಭ್ಯರ್ಥಿಯ ತಂದೆ ರಂಜಿತ್‌ ಕುಮಾರ್‌ ಬಂಧಿತರು. ಸಿಬಿಐ ಈವರೆಗೆ 6 ಎಫ್ಐಆರ್‌ಗಳನ್ನು ದಾಖಲಿಸಿದ್ದು, ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಹಾಗೂ ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ಗಳನ್ನು ದಾಖಲಿಸಿದೆ.

ಸಿಬಿಐ ಈವೆರಗೆ ಬಿಹಾರದಿಂದ 8, ಗುಜರಾತ್‌ನಿಂದ ಇಬ್ಬರು, ಡೆಹ್ರಾಡೂನ್‌ನಿಂದ ಒಬ್ಬರನ್ನು ಬಂಧಿಸಿದೆ. ಇದರಲ್ಲಿ ಒಯಾಸಿಸ್‌ ಶಾಲೆಯ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರೂ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next