Advertisement

Ullala: ಗ್ಯಾಸ್ ಸೋರಿಕೆಯಾಗಿ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ

09:43 AM Dec 08, 2024 | |

ಉಳ್ಳಾಲ: ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಗ್ಯಾಸ್ ಸೋರಿಕೆಯಾಗಿ ಡಿ.7ರ ಶನಿವಾರ ತಡರಾತ್ರಿ ಸ್ಪೋಟಗೊಂಡಿದ್ದು, ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Advertisement

ಗಾಯಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್ ಬಿನ್ ಇಸ್ಮಾಯಿಲ್ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಪತ್ನಿ ಕುಬ್ರ (40), ಮೆಹದಿ(15), ಮಝಿಹಾ (13) ಮಾಯಿ಼ಝಾ (11) ಗಂಭೀರ ಗಾಯಗೊಂಡಿದ್ದಾರೆ.

ಮುತ್ತಲಿಬ್ ವಿದೇಶದಲ್ಲಿದ್ದು, ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ವಾಸವಾಗಿದ್ದಾರೆ.

Advertisement

ಘಟನೆಯ ವಿವರ: ಕುಬ್ರ ಮತ್ತು ಅವರ ಮಕ್ಕಳು ಶನಿವಾರ (ಡಿ.7) ತಡರಾತ್ರಿ ಊಟ ಮಾಡಿ ರಾತ್ರಿ ‌ಮಲಗಿದ್ದು, ತಡರಾತ್ರಿ ಕುಬ್ರ ಅವರು ಶೌಚಾಲಯಕ್ಕೆ ತೆರಳಲು ಸ್ವಿಚ್ ಹಾಕಿದಾಗ ಸ್ಪೋಟ ಸಂಭವಿಸಿದೆ ಎಂಬ ಮಾಹಿತಿ ಬಂದಿದೆ.

ಸ್ಪೋಟಗೊಂಡ ಪರಿಣಾಮ ಮನೆಯ ಬೆಡ್ ರೂಂ ಸಹಿತ, ಅಡುಗೆ ಕೋಣೆಯ ಶೀಟ್ ಹಾಕಿದ್ದ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದ್ದು, ನಾಲ್ವರು ಗಂಬೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಯಾವುದೇ ಹಾನಿಯಾಗಿಲ್ಲ. ಬೆಡ್ ರೂಂ ಬಳಿಯಿದ್ದ ಸಿಲಿಂಡರ್ ಸೋರಿಕೆಯಾಗಿ ಈ ಘಟನೆ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿದೆ.

ಸ್ಥಳಕ್ಕೆ ಕೊಣಾಜೆ ಪೊಲೀಸರು, ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್ ಭೇಟಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಲ್ಕು ಜನರಿಗೆ ಗಾಯವಾಗಿದ್ದು, ಅವರನ್ನು ಕೆ.ಎಸ್.‌ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗೂ ತೀವ್ರ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next