Advertisement
ಟ್ಯಾಂಕರ್‌ನ ಹಿಂದಿನಿಂದ ಸಾಗುತ್ತಿದ್ದ ಇತರ ವಾಹನ ಚಾಲಕರು ನೀಡಿದ ಮಾಹಿತಿಯಂತೆ ಟ್ಯಾಂಕರನ್ನು ಉಚ್ಚಿಲ – ಕೆ.ಸಿ.ರೋಡ್ ನಡುವಿನ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿ ಅರ್ಧದಷ್ಟು ಆ್ಯಸಿಡ್ ಅನ್ನು ಎಂಸಿಎಫ್‌ನಿಂದ ತಂದಿದ್ದ ಬ್ಯಾರೆಲ್‌ಗಳಿಗೆ ವರ್ಗಾಯಿಸಲಾಯಿತು. ಉಳಿದ ಆ್ಯಸಿಡನ್ನು ಕಾರವಾರದಿಂದ ಆಗಮಿಸಿದ್ದ ಟ್ಯಾಂಕರ್‌ಗೆ ವರ್ಗಾಯಿಸಬೇಕಾಗಿತ್ತು. ಆದರೆ ಸೋಮವಾರ ತಡರಾತ್ರಿ ವರೆಗೂ ವರ್ಗಾವಣೆ ಆಗಿಲ್ಲ. ಟ್ಯಾಂಕರ್ ಬಂದಿದ್ದರೂ ತಂತ್ರಜ್ಞಾನಿಗಳು ಬಾರದೆ ವರ್ಗಾವಣೆ ಸಾಧ್ಯವಾಗಿಲ್ಲ. ಬೆಳಗ್ಗೆ ಘಟನೆ ನಡೆದಿದ್ದರೂ ರಾತ್ರಿ 11 ಗಂಟೆ ವರೆಗೂ ತಂತ್ರಜ್ಞಾನಿಗಳು ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಪ್ರದೇಶದಲ್ಲಿ ಮಧ್ಯಾಹ್ನದ ಬಳಿಕ ಆ್ಯಸಿಡ್ ವರ್ಗಾವಣೆ ಕಾರ್ಯಾಚರಣೆ ಆರಂಭಿಸಲಾಯಿತು. ಕೆಲವು ಮೀ. ವ್ಯಾಪ್ತಿಯಲ್ಲಷ್ಟೇ ಸುರಕ್ಷಾ ಕ್ರಮ ಕೈಗೊಳ್ಳಲಾಗಿತ್ತು. ವಾಹನ ಮತ್ತು ಜನಸಂಚಾರವನ್ನು ರಾತ್ರಿಯವರೆಗೂ ನಿರ್ಬಂಧಿಸಿರಲಿಲ್ಲ.
ಹೈಡ್ರೋಕ್ಲೋರಿಕ್ ಆ್ಯಸಿಡ್ ವಿಷಕಾರಿಯಾದರೂ ಸ್ಫೋಟಿಸುವ ಗುಣ ಹೊಂದಿಲ್ಲ ಹೆಚ್ಚು ಸೋರಿಕೆ ಯಾದರೆ ಸುತ್ತಲಿನ ಜೀವಿಗಳಲ್ಲಿ ಉಸಿರಾಟದ ಸಮಸ್ಯೆಗಳು ಕಾಣಬಹುದು. ಅಲ್ಲದೆ ರಬ್ಬರ್ ಹೊರತುಪಡಿಸಿ ಬೇರೆ ಎಲ್ಲ ರೀತಿಯ ಸೊತ್ತುಗಳನ್ನು ಹಾನಿಗೊಳಿಸಬಲ್ಲದು. ಮಣ್ಣಿಗೆ ಬಿದ್ದರೂ ಹಲವು ಸಮಯ ಆ ಭಾಗದಲ್ಲಿ ಗಿಡಗಳು ಬೆಳೆಯುವುದಿಲ್ಲ. ಇಂತಹ ಲಕ್ಷಣಗಳನ್ನು ಹೊಂದುವ ಹೈಡ್ರೋಕ್ಲೋರಿಕ್ ಅನಿಲವನ್ನು ಕಲರ್ ಡೈ ಸಹಿತ ವಿವಿಧ ಕಾಸೆ¾ಟಿಕ್ ಫಾರ್ಮುಲಾಗಳಿಗೆ ಬಳಸಲಾಗುತ್ತಿದೆ.