Advertisement

ಬಗೆಹರಿದ ವೀಸಾ ಸಮಸ್ಯೆ : ಪೋರ್ಚುಗಲ್‌ ತಲುಪಿದ ನೀರಜ್‌ ಚೋಪ್ರಾ

09:35 PM Jun 07, 2021 | Team Udayavani |

ಹೊಸದಿಲ್ಲಿ: ವೀಸಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮೂಲಕ ಭಾರತ ಸ್ಟಾರ್‌ ಜಾವೆಲಿನ್‌ ಎಸೆತಗಾರ, ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ನೀರಜ್‌ ಚೋಪ್ರಾ ಪೋರ್ಚುಗಲ್‌ ತಲಪುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

JSW. ಸ್ಪೋರ್ಟ್ಸ್ ನ ಸಿಇಒ ಹಾಗೂ ಚೋಪ್ರಾ ಅವರ ಸ್ಪಾನ್ಸರ್‌ ಆಗಿರುವ ಪಾರ್ಥ್ ಜಿಂದಾಲ್‌ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.

ಜೂ. 10ರಿಂದ ಲಿಸºನ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನೀರಜ್‌ ಚೋಪ್ರಾ ಪೋರ್ಚುಗಲ್‌ಗೆ ತೆರಳಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದಾಗಿ ಅವರ ಪ್ರಯಾಣಕ್ಕೆ ಅಡ್ಡಿ ಎದುರಾಗಿತ್ತು. ಕೊನೆಗೂ ಜೆ.ಎಸ್‌.ಡಬ್ಲ್ಯು. ಗ್ರೂಪ್‌ನ ಸತತ ಪ್ರಯತ್ನ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರ ಸಹಕಾರದಿಂದ ಸಮಸ್ಯೆ ಬಗೆಹರಿಯಿತು.

ಇದನ್ನೂ ಓದಿ :ಐಪಿಎಲ್‌ ಪಂದ್ಯಾವಳಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಿಸಲು ಬಿಸಿಸಿಐ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next