Advertisement

9 ಕ್ರೀಡಾಪಟುಗಳಿಗೆ ಪದ್ಮ ಗೌರವ: ಜಜಾರಿಯಾ ಪದ್ಮಭೂಷಣ; ನೀರಜ್‌ಗೆ ಪದ್ಮಶ್ರೀ

11:32 PM Jan 25, 2022 | Team Udayavani |

ಹೊಸದಿಲ್ಲಿ: ಈ ಸಾಲಿನ ಪದ್ಮ ಪುರಸ್ಕಾರಗಳ ಪಟ್ಟಿಯಲ್ಲಿ 9 ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. ಪ್ಯಾರಾಲಿಂಪಿಯನ್‌ ದೇವೇಂದ್ರ ಜಜಾರಿಯಾ ಪದ್ಮಭೂಷಣಕ್ಕೆ ಭಾಜನರಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಜಾವೆಲಿನ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಪ್ಯಾರಾ ಕ್ರೀಡಾಪಟುಗಳೇ ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕಾಣಿಸಿಕೊಂಡಿರುವುದು ಉಲ್ಲೇಖನೀಯ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚಿದ ಅವನಿ ಲೇಖರಾ, ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಈ ಸಾಧಕರ ಕಿರು ಪರಿಚಯ ಇಲ್ಲಿದೆ. ಬೇಸರದ ಸಂಗತಿಯೆಂದರೆ, ಕರ್ನಾಟಕದ ಯಾವುದೇ ಕ್ರೀಡಾಪಟುಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು!

ದೇವೇಂದ್ರ ಜಜಾರಿಯಾ
2016ರ ರಿಯೋ ಪ್ಯಾರಾ ಲಿಂಪಿಕ್ಸ್‌ನಲ್ಲಿ ದಿವ್ಯಾಂಗ ಕ್ರೀಡಾಪಟು, ಜಾವೆಲಿನ್‌ ತಾರೆ ದೇವೇಂದ್ರ ಜಜಾ ರಿಯಾ ಚಿನ್ನ ಜಯಿಸಿದ್ದರು. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು.

ಸುಮಿತ್‌ ಅಂತಿಲ್‌
ಪ್ಯಾರಾ ಜಾವೆಲಿನ್‌ ಎಸೆತ ಗಾರ ಸುಮಿತ್‌ ಅಂತಿಲ್‌ ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಚಿನ್ನ ಗೆದ್ದ ಸಾಧಕ. ಇವರ ಅಂತಿಮ ಎಸೆತದ ದೂರ ವಿಶ್ವದಾಖಲೆಯಾಗಿದೆ.

Advertisement

ಪ್ರಮೋದ್‌ ಭಗತ್‌
ಪ್ರಸ್ತುತ ಒಡಿಶಾದ ಭುವನೇಶ್ವರದಲ್ಲಿ ನೆಲೆಸಿರುವ ದಿವ್ಯಾಂಗ ಕ್ರೀಡಾಪಟು ಪ್ರಮೋದ್‌ ಭಗತ್‌ ಮೂಲತಃ ಬಿಹಾರದ ವೈಶಾಲಿ ಜಿಲ್ಲೆಯವರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಸಾಧನೆ ಇವರದು.

ಶಂಕರನಾರಾಯಣ ಮೆನನ್‌
ಕೇರಳದ ಚಾವಕ್ಕಾಡ್‌ನ‌ಲ್ಲಿರುವ ಉನ್ನಿ ಗುರುಕುಲ ಭಾರತದ ಪ್ರಾಚೀನ ಮಾರ್ಷಲ್‌ ಆರ್ಟ್ಸ್ ಮಾದರಿ ಹಾಗೂ ಕಳರಿಪಯಟ್‌ಗೆ ಜನಪ್ರಿಯ. ಇಲ್ಲಿ 93 ವರ್ಷದ ಶಂಕರನಾರಾಯಣ ಅವರೇ ಈಗಲೂ ಕಳರಿ ಕಲಿಸುತ್ತಾರೆ.

ಫೈಸಲ್‌ ಅಲಿ ದಾರ್‌
ಜಮ್ಮು ಕಾಶ್ಮೀರದ ಬಂಡಿಪೊರ ಜಿಲ್ಲೆಯ ಫೈಸಲ್‌ ಅಲಿ ದಾರ್‌ ಅವರು 4,000ಕ್ಕೂ ಅಧಿಕ ಮಕ್ಕಳಿಗೆ ವಿವಿಧ ರೀತಿಯ ಮಾರ್ಷಲ್‌ ಆರ್ಟ್ಸ್ ಕಲೆಯನ್ನು ಕಲಿಸುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಉಚಿತವಾಗಿ ಈ ಸೇವೆ ಸಲ್ಲಿಸುತ್ತಿದ್ದಾರೆ.

ವಂದನಾ ಕಟಾರಿಯಾ
ಉತ್ತರಾಖಂಡದ ಹರಿ ದ್ವಾರದವರಾದ ವಂದನಾ ಕಟಾರಿಯಾ ಭಾರತದ ಖ್ಯಾತ ಹಾಕಿ ಆಟಗಾರ್ತಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ 4ನೇ ಸ್ಥಾನ ಪಡೆಯಲು ಇವರ ಪಾತ್ರ ದೊಡ್ಡದು. ಇದೇ ಕೂಟದಲ್ಲಿ ವಂದನಾ ಹ್ಯಾಟ್ರಿಕ್‌ ಗೋಲು ಬಾರಿಸಿದ್ದರು.

ಅವನಿ ಲೇಖರಾ
ದಿವ್ಯಾಂಗ ಶೂಟರ್‌ ಅವನಿ ಲಖೇರಾ ರಾಜಸ್ಥಾನದ ಜೈಪುರದವರು. ವಯಸ್ಸು ಕೇವಲ 20 ವರ್ಷ. ಟೋಕಿಯೊ ಪ್ಯಾರಾಲಿಂಪಿಕ್ಸ್‌ 10 ಏರ್‌ ರೈಫ‌ಲ್ಸ್‌ ನಲ್ಲಿ ಚಿನ್ನ ಗೆದ್ದ ಸಾಧಕಿ. ಇದೇ ಕೂಟದ 50 ಮೀ. ರೈಫ‌ಲ್‌ನಲ್ಲಿ ಕಂಚು ಕೂಡ ಜಯಿಸಿದ್ದಾರೆ.

ಬ್ರಹ್ಮಾನಂದ ಸಂಖ್ವಾಲ್ಕರ್‌
ಗೋವಾದ ಪಣಜಿ ದಕ್ಷಿಣ ಭಾಗದಲ್ಲಿರುವುದು ಟೆಲಿಗಾವೊದಲ್ಲಿ ಜನಿಸಿದ ಬ್ರಹ್ಮಾನಂದ ಸಂಖ್ವಾಲ್ಕರ್‌ ಭಾರತ ಫ‌ುಟ್‌ಬಾಲ್‌ ತಂಡದ ಮಾಜಿ ನಾಯಕ. ಶ್ರೇಷ್ಠ ಗೋಲ್‌ಕೀಪರ್‌ ಕೂಡ ಆಗಿದ್ದರು. ಪ್ರಸ್ತುತ ಇವರಿಗೆ 67 ವರ್ಷ. ಹಲವು ದೇಶಿ ಫ‌ುಟ್‌ಬಾಲ್‌ ಕ್ಲಬ್‌ಗಳ ಪರವೂ ಆಡಿದ್ದಾರೆ.

ನೀರಜ್‌ಗೆ ಅವಳಿ ಗೌರವ
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ನೀರಜ್‌ ಚೋಪ್ರಾ ಅವರಿಗೆ ಗಣರಾಜ್ಯೋತ್ಸವದ ಮುನ್ನಾ ದಿನ “ಪರಮ ವಿಶಿಷ್ಟ ಸೇವಾ ಪದಕ’ ನೀಡಿ ಗೌರವಿಸಲಾ ಯಿತು. ಅವರು 4 ರಜಪೂತಾನ್‌ ರೈಫ‌ ಲ್ಸ್‌ನ ಸುಬೇದಾರ್‌ ಕೂಡ ಆಗಿದ್ದಾರೆ. ಮಂಗಳವಾರ ಸಂಜೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು 384 ರಕ್ಷಣಾ ಸಿಬಂದಿಗೆ ಶೌರ್ಯ ಹಾಗೂ ಇತರೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇದೇ ವೇಳೆ ನೀರಜ್‌ ಚೋಪ್ರಾ ಪದ್ಮಶ್ರೀ ಗೌರವಕ್ಕೂ ಭಾಜನರಾದರು.

ಪದ್ಮಭೂಷಣ
-ದೇವೇಂದ್ರ ಜಜಾರಿಯಾ, ಪ್ಯಾರಾಲಿಂಪಿಕ್ಸ್‌ ಜಾವೆಲಿನ್‌ ಎಸೆತಗಾರ, ರಾಜಸ್ಥಾನ

ಪದ್ಮಶ್ರೀ
-ಸುಮಿತ್‌ ಅಂತಿಲ್‌, ಪ್ಯಾರಾಲಿಂಪಿಕ್ಸ್‌ ಜಾವೆಲಿನ್‌ ಎಸೆತಗಾರ, ಹರ್ಯಾಣ
-ಪ್ರಮೋದ್‌ ಭಗತ್‌, ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌, ಒಡಿಶಾ
-ನೀರಜ್‌ ಚೋಪ್ರಾ, ಜಾವೆಲಿನ್‌ ಎಸೆತಗಾರ, ಹರ್ಯಾಣ
-ಶಂಕರನಾರಾಯಣ ಮೆನನ್‌, ಮಾರ್ಷಲ್‌ ಆರ್ಟ್ಸ್, ಕೇರಳ
-ಫೈಸಲ್‌ ಅಲಿ ದಾರ್‌, ಕುಂಗ್‌ ಫೂ, ಜಮ್ಮು-ಕಾಶ್ಮೀರ
-ವಂದನಾ ಕಟಾರಿಯಾ, ಹಾಕಿ, ಉತ್ತರಾಖಂಡ
-ಅವನಿ ಲೇಖರಾ, ಪ್ಯಾರಾಲಿಂಪಿಕ್ಸ್‌ ಶೂಟರ್‌, ರಾಜಸ್ಥಾನ
-ಬ್ರಹ್ಮಾನಂದ ಸಂಖ್ವಾಲ್ಕರ್‌, ಫುಟ್‌ಬಾಲ್‌, ಗೋವಾ

 

Advertisement

Udayavani is now on Telegram. Click here to join our channel and stay updated with the latest news.

Next