Advertisement

Diamond League Final: ನೀರಜ್‌ ಚೋಪ್ರಾ, ಅವಿನಾಶ್‌ ಸಾಬ್ಲೆ ಭರವಸೆ

11:04 PM Sep 11, 2024 | Team Udayavani |

ಬ್ರುಸೆಲ್ಸ್‌ (ಬೆಲ್ಜಿಯಂ): ಶುಕ್ರವಾರ ಮತ್ತು ಶನಿವಾರ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಅವಳಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ ಮತ್ತು ಸ್ಟೀಪಲ್‌ಚೇಸರ್‌ ಅವಿನಾಶ್‌ ಸಾಬ್ಲೆ ಭಾರತವನ್ನು ಪ್ರತಿನಿಧಿಸಲಿದ್ದು, ಭಾರೀ ನಿರೀಕ್ಷೆ ಮೂಡಿಸಿದ್ದಾರೆ.

Advertisement

ನೀರಜ್‌ ಚೋಪ್ರಾ 4ನೇ ಸ್ಥಾನದೊಂದಿಗೆ ಜಾವೆಲಿನ್‌ ಫೈನಲ್‌ ಅರ್ಹತೆ ಸಂಪಾದಿಸಿದ್ದಾರೆ. ಫೈನಲ್‌ನಲ್ಲಿ ಒಟ್ಟು 8 ಮಂದಿ ಇದ್ದಾರೆ. ಕಳೆದ ಲಾಸೆನ್‌ ಹಾಗೂ ದೋಹಾ ಡೈಮಂಡ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್‌, ದ್ವಿತೀಯ ಸ್ಥಾನಿಯಾಗಿದ್ದರು. ಲಾಸೆನ್‌ನಲ್ಲಿ 89.49 ಮೀ. ಹಾಗೂ ದೋಹಾದಲ್ಲಿ 88.36 ಮೀ. ದೂರದ ಸಾಧನೆ ಇವರದಾಗಿತ್ತು.

ಏಷ್ಯನ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಅವಿನಾಶ್‌ ಸಾಬ್ಲೆ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧೆಗೆ ಇಳಿ ಯ ಲಿದ್ದಾರೆ. ಒಟ್ಟು 12 ಮಂದಿ ಕಣದಲ್ಲಿದ್ದಾರೆ. ಇದೇ ವರ್ಷ ಪೋಲೆಂಡ್‌ನ‌ಲ್ಲಿ ನಡೆದ ಸಿಲೇಸಿಯಾ ಡೈಮಂಡ್‌ ಲೀಗ್‌ನಲ್ಲಿ ಅವಿನಾಶ್‌ 14ನೇ ಸ್ಥಾನಿಯಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next