Advertisement

ಬೇವು ಬೆಳೆ

04:41 PM May 08, 2017 | Harsha Rao |

ಬೇವಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ ಇದರಲ್ಲಿರುವ ಕೀಟನಾಶಕ ಗುಣದಿಂದ.  ಬೇವಿನ ಬೀಜದಿಂದ ತಯಾರಿಸಿದ ಪೀಡೆನಾಷಕಗಳಿಂದ ಸುಮಾರು 200 ಜಾತಿಯ ಕೀಟಗಳನ್ನು ನಿರ್ವಹಣೆ ಮಾಡಬಹುದು.
ಬೇವಿನ ಬೀಜಕಷಾಯ ತಯಾರಿಸಿ ಉಳಿದ ಪದಾರ್ಥವನ್ನು ಬೇವಿನ ಹಿಂಡಿರೂಪದಲ್ಲಿ ಬಳಸಬಹುದು. ಹಿಂಡಿಯಲ್ಲಿ ಸಾರಜನಕ, ರಂಜಕ ಮತ್ತು ಪೋಟ್ಯಾಷ್‌ ಅಲ್ಲದೆ, ಶೇ 1 ರಿಂದ 1.3 ರಷ್ಟು ಗಂಧಕದ ಅಂಶ ಇರುವುದರಿಂದ ಎಣ್ಣೆಕಾಳು ಬೆಳೆಗಳಿಗೆ ಸೂಕ್ತವಾದ ಜೈವಿಕ ಗೊಬ್ಬರ ಇದು.  ಇದು ಬೆಳೆಗಳ ದಂಡಾಣುನಾಶಕವಾಗಿ ಕಾರ್ಯನಿರ್ವಹಿಸುತ್ತದೆ.
ಕೀಟಗಳನ್ನು ಬೇವು ಯಾವರೀತಿ ನಿಯಂತ್ರಿಸುತ್ತದೆ ?

Advertisement

1.  ಘಾಟು ವಾಸನೆ ಮತ್ತು ಕಹಿ ರುಚಿಯಿಂದಾಗಿ ಕೀಟಗಳು ಬೆಳೆಯ ಸಮೀಪ ಬರದಂತೆ ಮಾಡಿಗಿಡದ ಮೇಲೆ ತತ್ತಿ ಇಡುವುದನ್ನು ತಡೆಗಟ್ಟಲು ಸಹಕಾರಿ.

2. ಬೇವಿನ ಔಷಧಿ ಸಿಂಪರಣೆಯಿಂದ ಬೆಳೆಗಳ ಭಾಗಗಳು ಕಹಿಯಾಗಿ, ಕೀಟಗಳು ಆ ಭಾಗವನ್ನು ತಿನ್ನುವುದಿಲ್ಲ.

3. ಕೀಟಗಳ ವಿವಿಧ ಬೆಳವಣಿಗೆ ಹಂತಗಳ ಮೇಲೆ ಇದು ತೀವ್ರ ಪರಿಣಾಮ ಉಂಟು ಮಾಡಿ ಚರ್ಮ ಕಳಚುವಿಕೆಯನ್ನು
ಕುಂಠಿತಗೊಳಿಸುತ್ತದೆ. ಚರ್ಮದಲ್ಲಿ ಅವಶ್ಯವಾಗಿ ಬೇಕಾಗಿರುವ ಕೈಟನ್‌ ತಯಾರಿಕೆ ತಡೆಗಟ್ಟುತ್ತದೆ.

4.  ಹೆಣ್ಣುಕೀಟ ತತ್ತಿಯಿಡದಂತೆ ತಡೆಗಟ್ಟುತ್ತದೆ.  ಕಹಿಯ ಗುಣದಿಂದಾಗಿ ಬೆಳೆಯನ್ನು ತಿಂದ ಕೀಟಗಳು ಸಾಯುತ್ತವೆ.  ಹೆಣ್ಣು ಮತ್ತು ಗಂಡು ಪತಂಗಗಳು ಸಂಯೋಗ ಹೊಂದದಂತೆ ತಡೆಗಟ್ಟುತ್ತದೆ. 

Advertisement

ಕಷಾಯ ತಯಾರಿ ಹೀಗೆ!

ಬೇವಿನ ಬೀಜದ ಕಷಾಯ ತಯಾರಿಸಲು ಒಳ್ಳೆಯ ಗುಣಮಟ್ಟದ ತಾಜಾ ಬೇವಿನ ಹಣ್ಣುಗಳನ್ನು ತಂದು ನೀರಿನಲ್ಲಿ ನೆನೆಯಿಡಬೇಕು. ನಂತರ ಹಣ್ಣುಗಳನ್ನು ಚೆನ್ನಾಗಿ ಹಿಚುಕಿ ಬೀಜಗಳನ್ನು ಬೇರ್ಪಡಿಸಬೇಕು. ಬೀಜಗಳನ್ನು ಒಣಗಿಸಿ ಹೊರಕವಚತೆಗೆದು ಒಳಗಿನ ಬೀಜದ ತಿರುಳನ್ನು ಬೇರ್ಪಡಿಸಬೇಕು. ಬೀಜಗಳನ್ನು (ತಿರುಳನ್ನು) ಒಣಗಿಸಿ ಪುಡಿ ಮಾಡಬೇಕು. 5 ಕಿ. ಗ್ರಾಂ ಪುಡಿ ಮಾಡಿದ ಬೀಜವನ್ನು ಒಂದು ಅರಿವೆಯಲ್ಲಿ ಕಟ್ಟಿ ನೀರಿರುವ ಬಕೆಟ್‌ನಲ್ಲಿ 10- 12 ಗಂಟೆಗಳ ಕಾಲ ನೆನೆಇಡಬೇಕು. ಬೇವಿನ ಬೀಜದ ಕಷಾಯವನ್ನು ಬಟ್ಟೆಯಿಂದ ಸೋಸಬೇಕು. ಪ್ರತಿ ಲೀಟರ್‌ದ್ರಾವಣಕ್ಕೆ ಎಡೂ¾ರು ಗ್ರಾಂ ಸಾಬೂನಿನ ಪುಡಿ ಬೆರೆಸಬೇಕು. 5ಕಿ. ಗ್ರಾಂ ಬೇವಿನ ಬೀಜದ ಈ ಕಷಾಯವನ್ನು 100 ಲೀ. ನೀರಿನಲ್ಲಿ ಬೆರೆಸಬೇಕು. ಇದು ಶೇ. 5ರ ಬೇವಿನ ಬೀಜದ ಕಷಾಯವಾಗಿರುತ್ತದೆ.

– ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next