Advertisement

ಏಶ್ಯನ್‌ ದಾಖಲೆ ಸ್ಥಾಪಿಸಿದರೂ ಫೈನಲ್‌ಗೆ ಏರದ ರಿಲೇ ಟೀಮ್‌

11:19 PM Aug 06, 2021 | Team Udayavani |

ಟೋಕಿಯೊ: ಭಾರತದ ಪುರುಷರ ರಿಲೇ ತಂಡ ಏಶ್ಯನ್‌ ದಾಖಲೆ ಸ್ಥಾಪಿಸಿಯೂ ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ಗೆ ತೇರ್ಗಡೆಯಾಗಲು ವಿಫ‌ಲವಾಗಿದೆ.

Advertisement

ಮುಹಮ್ಮದ್‌ ಅನಾಸ್‌ ಯಾಹಿಯ, ತೋಮ್‌ ನೋ ನಿರ್ಮಲ್‌, ರಾಜೀವ್‌ ಅರೋಕಿಯಾ ಮತ್ತು ಅಮೋಜ್‌ ಜೆಕೋಬ್‌ ಅವರನ್ನೊಳಗೊಂಡ ಭಾರತದ 4×400 ಮೀ. ರಿಲೇ ತಂಡ ದ್ವಿತೀಯ ಹೀಟ್ಸ್‌ನಲ್ಲಿ 3 ನಿಮಿಷ, 25 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನಿಯಾಯಿತು. ಒಟ್ಟಾರೆಯಾಗಿ 9ನೇ ಸ್ಥಾನಕ್ಕೆ ಕುಸಿದು 8 ತಂಡಗಳ ಫೈನಲ್‌ ಸ್ಪರ್ಧೆಯಿಂದ ದೂರ ಉಳಿಯಬೇಕಾಯಿತು.

ಭಾರತದ 3 ನಿಮಿಷ, 25 ಸೆಕೆಂಡ್ಸ್‌ಗಳ ಈ ಸಾಧನೆ ಏಶ್ಯನ್‌ ದಾಖಲೆ ಎನಿಸಿತು. ಹಿಂದಿನ ದಾಖಲೆ ಕತಾರ್‌ ಹೆಸರಲ್ಲಿತ್ತು (3 ನಿಮಿಷ, 56 ಸೆಕೆಂಡ್ಸ್‌). ಇದು 2018ರ ಏಶ್ಯನ್‌ ಗೇಮ್ಸ್‌ನಲ್ಲಿ ದಾಖಲಾಗಿತ್ತು.

ಇದನ್ನೂ ಓದಿ :ನಾಟಿಂಗ್‌ಹ್ಯಾಮ್‌ ಟೆಸ್ಟ್‌ : 95 ರನ್‌ ಲೀಡ್‌ ಗಳಿಸಿದ ಭಾರತ

50 ಕಿ.ಮೀ. ವಾಕ್‌: ಗುರಿ ಪೂರೈಸದ ಗುರುಪ್ರೀತ್‌
ಭಾರತದ ವಾಕ್‌ ರೇಸರ್‌ ಗುರುಪ್ರೀತ್‌ ಸಿಂಗ್‌ 50 ಕಿ.ಮೀ. ಗುರಿ ಪೂರೈಸದೆ ಅರ್ಧದಲ್ಲೇ ಹಿಂದೆ ಸರಿದಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಗುರುಪ್ರೀತ್‌ ಸಿಂಗ್‌ 35 ಕಿ.ಮೀ. ( 2 ಗಂಟೆ 55 ನಿಮಿಷ) ಓಟವನ್ನಷ್ಟೇ ಕ್ರಮಿಸಿ 51ನೇ ಸ್ಥಾನಿಯಾಗಿ ಕೂಟದಿಂದ ನಿರ್ಗಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next