ನವ ದೆಹಲಿ : ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಇಂದು(ಮಂಗಳವಾರ, ಆಗಸ್ಟ್ 3) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಈ ಹಿಂದೆ, ಸಕ್ಕರೆ ಬೆಲೆ ಮತ್ತು ಎಥೆನಾಲ್ ಬ್ಲೆಂಡಿಂಗ್ ಪ್ರೋಗ್ರಾಮ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಕೋರಿ ನ್ಯಾಷನಲ್ ಫೆಡರೇಷನ್ ಆಫ್ ಕೋ-ಆಪರೇಟಿವ್ ಶುಗರ್ ಫ್ಯಾಕ್ಟರೀಸ್ ಲಿಮಿಟೆಡ್ (NSCSF) ನ ಅಧ್ಯಕ್ಷ ಜಯಪ್ರಕಾಶ್ ದಂಡೇಗಾಂವ್ಕರ್ ಅವರ ಪತ್ರವನ್ನು ಪವಾರ್, ಶಾ ಅವರಿಗೆ ರವಾನಿಸಿದ್ದರು.
ಇದನ್ನೂ ಓದಿ : ವಿಜಯಪುರ: ಕೋವಿಡ್ ನಿಗ್ರಹಕ್ಕಾಗಿ ಹಿಂಗಣಿ ಬ್ಯಾರೇಜ್ ನಿರ್ಬಂಧ : ಮುಳ್ಳುಕಂಟಿ ಮೀರಿ ಜನರ ಓಡಾಟ
ಇನ್ನು, ಅಮಿತ್ ಶಾ ಅವರನ್ನು ಭೇಟಿ ಮಾಡಿದ ಪವಾರ್ ಈ ವಿಚಾರವನ್ನು ಹೊರತಾಗಿ ಬೇರೆ ಯಾವ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಈವರೆಗೆ ತಿಳಿದುಬಂದಿಲ್ಲ.
ಕಳೆದ ವಾರ, ಪವಾರ್ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದ್ದರು, ಅವರ ಮಗಳು ಮತ್ತು ಸಂಸದೆ ಮಿಸಾ ಭಾರತಿ ಕೂಡ ಸಭೆಯಲ್ಲಿ ಇದ್ದರು.
ಇದನ್ನೂ ಓದಿ : ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ