Advertisement

ಕಪ್ಪು ಮಹಿಳೆ ಇದೇ ಮೊದಲ ಬಾರಿಗೆ ಅಮೆರಿಕ ನೌಕಾ ಪಡೆಗೆ ಸೇರ್ಪಡೆ!

10:27 AM Jul 13, 2020 | sudhir |

ಕಿಂಗ್ಸ್‌ವಿಲ್ಲೆ: ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿಗೆ ಕಪ್ಪು ಜನಾಂಗದ ಮಹಿಳೆ ಯುದ್ಧ ವಿಮಾನದ ಪೈಲಟ್‌ ಆಗಿ ನೇಮಕಗೊಂಡಿದ್ದಾರೆ.

Advertisement

ಲೆಫ್ಟಿನೆಂಟ್‌ ಜೆ.ಜಿ. ಮೇಡ್‌ಲೈನ್‌ ಸ್ವೀಗಲ್‌ ಎಂಬಾಕೆ ನೌಕಾಪಡೆ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಫ್ಲೈಟ್‌ ಆಫೀಸರ್‌ ಹುದ್ದೆ ಅಲಂಕರಿಸಲಿದ್ದಾರೆ. 1974ರಲ್ಲಿ ರೋಸ್‌ಮೇರಿ ಮ್ಯಾರಿನರ್‌ ಟ್ಯಾಕ್ಟಿಕಲ್‌ ಫೈಟರ್‌ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು.

45 ವರ್ಷಗಳ ಬಳಿಕ ಮತ್ತೆ ಈ ಸಾಧನೆಗೆ ಸ್ವೀಗಲ್‌ ಸಾಕ್ಷಿಯಾಗುತ್ತಿದ್ದು, ಪೈಲಟ್‌ ಆಗಿ ಹುದ್ದೆ ನಿರ್ವಹಿಸಲಿದ್ದಾರೆ. ಕಪ್ಪು ಮಹಿಳೆಯ ನೇಮಕವನ್ನು ಅಮೆರಿಕ ನೌಕಾಪಡೆ “ಇತಿಹಾಸ ಸೃಷ್ಟಿ’ ಅಂತಲೇ ಬಣ್ಣಿಸಿದೆ. ಜಾರ್ಜ್‌ ಫ್ಲಾಯ್ಡ ಹತ್ಯೆ ವಿರೋಧದ ಕಾವಿನಲ್ಲಿರುವ ಅಮೆರಿಕದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next