Advertisement

ನವರಾತ್ರಿ: ಪ್ರಯಾಣಿಕರಿಗೆ ವಿಶೇಷ ಮೆನು ನೀಡಿದ ರೈಲ್ವೆ ಸಚಿವಾಲಯ

03:49 PM Sep 26, 2022 | Team Udayavani |

ಹೊಸದಿಲ್ಲಿ: ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.

Advertisement

ಈ ವಿಶೇಷ ಆಫರ್ ಬಗ್ಗೆ ಕೂ ಮಾಡಿರುವ ರೈಲ್ವೇ ಸಚಿವಾಲಯ, ಈ ವಿಶೇಷ ಮೆನುವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುವುದು ಮತ್ತು ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು ಎಂದು ಅದು ಹೇಳಿದೆ.

ಇದನ್ನೂ ಓದಿ:ಆರ್ ಎಸ್ಎಸ್ ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರ ಕಾರ್ ಮೇಲೆ ‘ಕಿಲ್ ಯು ಜಿಹಾದಿ’ ಬರಹ

“ನವರಾತ್ರಿಯ ಮಂಗಳಕರ ಹಬ್ಬದ ಸಂದರ್ಭದಲ್ಲಿ, ಭಾರತೀಯ ರೈಲ್ವೇಯು ವಿಶೇಷ ಮೆನುವನ್ನು ನಿಮಗೆ ಪೂರೈಸುತ್ತಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುತ್ತದೆ. ನಿಮ್ಮ ರೈಲು ಪ್ರಯಾಣಕ್ಕಾಗಿ ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ನವರಾತ್ರಿ ಭಕ್ಷ್ಯಗಳನ್ನು ಆರ್ಡರ್ ಮಾಡಿ, ಇ-ಕ್ಯಾಟರಿಂಗ್ ಗೆ ಭೇಟಿ ನೀಡಿ. irctc.co.in ಅಥವಾ 1323 ಗೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

Koo App

Advertisement

Udayavani is now on Telegram. Click here to join our channel and stay updated with the latest news.

Next