Advertisement

Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ

03:43 AM Dec 18, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಮುಂದುವರಿಸಬೇಕೇ ಅಥವಾ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಮೀಸಲು ನೀಡಬೇಕೇ ಎಂಬ ಬಗ್ಗೆ ಸಮಾಲೋಚನೆ ನಡೆಯಲಿ ಎಂಬ ಸಲಹೆಯನ್ನು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಯಲ್ಲಿ ನೀಡಿದ್ದಾರೆ.

Advertisement

ರಾಜ್ಯಸಭೆಯಲ್ಲಿ ನಡೆದ ಸಂವಿಧಾನ ಕುರಿತಾದ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತ ನಾಡಿದ ಅವರು, ಮೀಸಲಾತಿ ಸಹಿತ ಹಲವು ರೀತಿಯ ಸಮಸ್ಯೆಗಳನ್ನು ಕಳೆದ 75 ವರ್ಷಗಳಲ್ಲಿ ದೇಶ ಎದುರಿಸಿದ್ದು, ಮೀಸಲಾತಿಯ ಹೊರತಾಗಿಯೂ ದೇಶದಲ್ಲಿ ಇಂದಿಗೂ ಎರಡು ಹೊತ್ತಿನ ಊಟಕ್ಕೆ ಪರದಾಡುವ ಜನ ರಿದ್ದಾರೆ. ಮೀಸಲು ನೀಡಿದ್ದರೂ ಅವರ ಜೀವನ ಏಕೆ ಸುಧಾರಿಸಿಲ್ಲ ಎಂಬ ಚಿಂತನೆ ನಡೆಯಬೇಕು ಎಂದಿದ್ದಾರೆ.

ಜಾತಿ ಆಧಾರಿತ ಮೀಸಲಾತಿ ಮುಂದುವರಿಸಬೇಕೇ ಅಥವಾ ಕಡು ಬಡತನದಲ್ಲಿ ಇರುವವರನ್ನು ಮಾತ್ರ ಮೀಸಲಾತಿಗೆ ಪರಿಗಣಿಸಬೇಕೇ ಎಂಬುದನ್ನು ಸದನ ನಿರ್ಧರಿಸ ಬೇಕಿದೆ. ಬಳಿಕ ಪ್ರಧಾನಿ ಇದನ್ನು ವಿಮರ್ಶಿಸಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next