ಮುಂಬಯಿ: ನವ ತರುಣ ಮಿತ್ರ ಮಂಡಳಿ ಮೀರಾರೋಡ್ ಇದರ 13ನೇ ವರ್ಷದ ಸಾರ್ವ ಜನಿಕ ಗಣೇಶೋತ್ಸವವು ಮೀರಾ- ಭಾಯಂದರ್ ರೋಡ್ ದೀಪಕ್ ಆಸ್ಪತ್ರೆಯ ಸಮೀಪದ ಪಿ. ಕೆ. ರೋಡ್ ಆವರಣದಲ್ಲಿ ಸೆ. 13 ರಂದು ಪ್ರಾರಂಭಗೊಂಡಿದ್ದು, ಸೆ. 23 ರವರೆಗೆ ಜರಗಿದೆ.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗೌರವ ಕಾರ್ಯದರ್ಶಿ ಚಲನಚಿತ್ರ ಮತ್ತು ರಂಗಭೂಮಿ ನಟ ಜಿ. ಕೆ. ಕೆಂಚನಕೆರೆ ಮಾತನಾಡಿ, ಹನ್ನೊಂದು ದಿನಗಳವರೆಗೆ ನಡೆಯುವ ಗಣೇ ಶೋತ್ಸವದಲ್ಲಿ ತವರೂರ ಕಲಾ ಸಂಸ್ಕೃತಿಗಳನ್ನು ಬಿಂಬಿಸಲಾಗಿದೆ. ದುಬಾರಿ ವೆಚ್ಚಗಳನ್ನು ಕಡಿಮೆಗೊಳಿಸಿ ಸಮಾಜಮುಖೀ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಧ್ಯಕ್ಷ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು ಸ್ವಾಗತಿಸಿ ಗಣ್ಯರನ್ನು ಗೌರವಿಸಿದ ಅವರು ಸೆ. 23 ರಂದು ಶೋಭಾಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ಮಾಡಲಾಯಿತು.
ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ತೆಳ್ಳಾರ್, ಕೋಶಾಧಿಕಾರಿ ರವಿ ಪುತ್ರನ್, ಪ್ರವೀಣಾ ಕದಂ, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ, ಮಹಿಳಾ ಸದಸ್ಯರಿಂದ ಮುಂದಾಳತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಭಜನೆ, ಗಣಪತಿ ರಂಗಪೂಜೆ ಮತ್ತು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಯಕ್ಷಗಾನ ಮಂಡಳಿ ಪಕ್ಷಿಕೆರೆ ಇದರ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಮೂಲಕ ಶ್ರೀ ಶನೀಶ್ವರ ಪೂಜೆ ಜರಗಿತು. ತುಳು-ಕನ್ನಡಿಗರು ರಾಜಕೀಯ ನೇತಾರರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್