Advertisement

ಕ್ವಾರಂಟೈನ್‌ಗೆ ವಿರೋಧಿಸಿದ ಸ್ಥಳೀಯರು

05:38 PM May 10, 2020 | Suhan S |

ನಾಗಮಂಗಲ: ಮುಂಬೈನಿಂದ ಆಗಮಿಸಿದ್ದ ವ್ಯಕ್ತಿಯೋರ್ವನನ್ನು ಕ್ವಾರಂಟೈನ್‌ ಮಾಡಲು ಬೆಳ್ಳೂರು ಕ್ರಾಸ್‌ ಬಳಿ ಇರುವ ಎಸ್‌ಎಲ್‌ವಿ ಸಮುದಾಯ ಭವನ ಪರೀಕ್ಷಿಸಲು ತೆರಳಿದ ತಾಲೂಕು ಟಾಸ್ಕ್ಫೋರ್ಸ್‌ ಸಮಿತಿಗೆ ಬೆಳ್ಳೂರು ಕ್ರಾಸ್‌ನಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಅಂತರ ರಾಜ್ಯದಿಂದ ಬಂದ ವ್ಯಕ್ತಿಯನ್ನು ಕ್ವಾರಂಟೈನ್‌ ಮಾಡಲು ಅಧಿಕಾರಿಗಳು ಕರೆ ತಂದಿದ್ದ ಸುದ್ದಿ ತಿಳಿದು ಅಕ್ಕಪಕ್ಕ ಗ್ರಾಮಸ್ಥರು ಅಧಿಕಾರಿಗಳ ಕ್ರಮವನ್ನು ಖಂಡಿಸಿ ವಿರೋಧ ವ್ಯಕ್ತಪಡಿಸಿದರು. ಮುಂಬೈ ಮತ್ತು ಹೊರ ರಾಜ್ಯಗಳಿಂದ ಕರೆತರುವ ಯಾರನ್ನೂ ನಮ್ಮ ತಾಲೂಕಿನಲ್ಲಿ ಕ್ವಾರಂಟೈನ್‌ ಮಾಡಬೇಡಿ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕ್ವಾರೆಂಟೈನ್‌ಗೆ ಮುಂದಾಗಿರುವ ಅಧಿಕಾರಿಗಳು. ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಕ್ರಮವನ್ನು ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಾರ್ವಜನಿಕರ ವಿರೋಧದಿಂದ ಬೇಸತ್ತ ಅಧಿಕಾರಿಗಳು ಕರೆತಂದಿದ್ದವರನ್ನು ಹೋಂ ಕ್ವಾರಂಟೈನ್‌ ಮಾಡಿ ಕೈತೊಳೆದುಕೊಂಡರು. ಇತ್ತೀಚೆಗೆ ನಾಗಮಂಗಲದ ಕದಬಹಳ್ಳಿ, ಸೋಮನಹಳ್ಳಿ ಮತ್ತು ಕೋಟೆಬೆಟ್ಟದಲ್ಲಿ ಗ್ರಾಮಸ್ಥರು ಮುಂಬೈನಿಂದ ಬಂದವರ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧದಿಂದ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಹೊರ ರಾಜ್ಯಗಳಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿ,  ಪಾಸಿಟೀವ್‌ ಬಂದರೆ ಅಂತಹವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ನೆಗೆಟಿವ್‌ ಬಂದವರನ್ನು ಮಾತ್ರ ತಾಲೂಕಿನ ವಿವಿಧ ಹೋಟೆಲ್‌, ಲಾಡ್ಜ್ಗಳಲ್ಲಿಟ್ಟು ನಿಗಾ ವಹಿಸಲಾಗುವುದು  –ಕುಂಇ ಅಹಮದ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next