Advertisement

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

03:50 AM Nov 27, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರ ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸುದ್ದಿಗಾರರೊಂದಿಗೆ ವ್ಯಂಗ್ಯವಾಡಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕರೇ ಈಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿಗಳ ಪರಿಣಾಮ ದರ, ತೆರಿಗೆ ಹೆಚ್ಚಳವಾಗಿದೆ. ತಿನ್ನುವ ಅನ್ನಕ್ಕೂ ಕಲ್ಲು ಹಾಕಿದ್ದಾರೆ. ಆಸ್ಪತ್ರೆ ಸೇವೆಗಳ ದರ ಜಾಸ್ತಿ ಮಾಡಿದ್ದಾರೆ. ಪೋಸ್ಟ್‌ ಮಾರ್ಟಂಗೂ ದರ ನಿಗದಿ ಮಾಡಲಿ, ಅದೊಂದು ಯಾಕೆ ಉಳಿಸಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ಬಾಂಗ್ಲಾದಲ್ಲಿ ಮತಾಂಧ ಮುಸ್ಲಿಮರು ಹಿಂದೂಗಳನ್ನು ಗುರಿ ಮಾಡುತ್ತಿದ್ದಾರೆ. ಇಸ್ಕಾನ್‌ ಭಯೋತ್ಪಾದನೆ ಮಾಡಿದ ಉದಾಹರಣೆ ಜಗತ್ತಿನಲ್ಲೆಲ್ಲೂ ಇಲ್ಲ. ಆದರೆ ಬಾಂಗ್ಲಾದಲ್ಲಿ ಇಸ್ಕಾನ್‌ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ನಿರ್ಣಯ ಮಾಡಲಾಗಿದೆ. ಇಸ್ಕಾನ್‌ನ ಮುಖ್ಯಸ್ಥರನ್ನು ಬಂಧಿಸಿ ಸೆರೆಮನೆಗೆ ದೂಡಿರುವುದು ಆಘಾತಕಾರಿ ಸಂಗತಿ. ಮತಾಂಧತೆಯ ಕಾರಣಕ್ಕೆ ಬಾಂಗ್ಲಾದಲ್ಲಿ ಹಿಂದೂಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ತನ್ನೆಲ್ಲ ಪ್ರಯತ್ನ ಹಾಕಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇದರ ಬಗ್ಗೆ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next