Advertisement

ಹಿಮಾ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ

10:52 AM Jul 15, 2018 | Team Udayavani |

ಟಾಂಪರೆ (ಫಿನ್ಲಂಡ್‌): ಹಿಮಾ ದಾಸ್‌ 400 ಮೀ. ವೈಯಕ್ತಿಕ ವಿಭಾಗದಲ್ಲಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಇವರನ್ನೊಳಗೊಂಡ 4/400 ಮೀ. ರಿಲೇ ತಂಡ ಇದೇ ಕೂಟದಲ್ಲಿ ಕಿರಿಯರ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಪದಕ ಗೆಲ್ಲಲು ವಿಫ‌ಲವಾದರೂ ಹಿಮಾ, ಎಸ್‌. ವೆಂಕಟೇಶನ್‌, ಜಿಸ್ನಾ ಮ್ಯಾಥ್ಯೂ, ರಿತಿಕಿ ಅವರನ್ನೊಳಗೊಂಡ ತಂಡ 4ನೇ ಸ್ಥಾನಿಯಾಗಿ ಕೂಟ ಮುಗಿಸಿತು. 

Advertisement

ಒಟ್ಟಾರೆ 3 ನಿಮಿಷ, 39.10 ಸೆಕೆಂಡ್ಸ್‌ನಲ್ಲಿ ಈ ದೂರ ಕ್ರಮಿಸುವ ಮೂಲಕ ಭಾರತೀಯರು ರಾಷ್ಟ್ರೀಯ ದಾಖಲೆ ಮಾಡಿದರು. ಈ ಹಿಂದೆ 2002ರಲ್ಲಿ ನಡೆದ ಕೂಟದಲ್ಲಿ ಭಾರತೀಯ  4/400 ಮೀ. ರಿಲೇ ತಂಡ 3 ನಿಮಿಷ 40.50 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next