Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ| ಶ್ರೀನಿವಾಸ ಬಳ್ಳಿ, ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ(ಉತ್ತರ ಪ್ರಾಂತ) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ.30ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು.
Related Articles
Advertisement
100ಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರು ಗೋಷ್ಠಿಗಳಲ್ಲಿ ಭಾಗವಹಿಸುವರು ಎಂದರು. ಭಾರತೀಯ ಶಿಕ್ಷಣ ಮಂಡಲದ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿ ಬಗ್ಗೆ ವಿಶ್ಲೇಷಣೆ ಮಾಡಲಾಗುವುದು. ದೇಶದ ಪ್ರತಿಯೊಂದು ಪ್ರದೇಶಗಳಲ್ಲಿ ಎನ್ ಇಪಿ ಅನುಷ್ಠಾನ ಕುರಿತು ನಡೆದಿರುವ ಪ್ರಯತ್ನ, ಪ್ರಯೋಗಗಳ ವರದಿ ಪಡೆಯಲಾಗುವುದು. ಎನ್‌ಇಪಿ ಹಾಗೂ ರಾಷ್ಟ್ರೀಯ ಶಿಕ್ಷಣ ಕುರಿತು ಲೇಖನಗಳುಳ್ಳ ಸ್ಮರಣ ಸಂಚಿಕೆ ಸಮಷ್ಠಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ವಿಟಿಯು ಕುಲಪತಿ ಪ್ರೋ| ಕರಿಸಿದ್ದಪ್ಪ ಮಾತನಾಡಿ, ಎನ್‌ಇಪಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಜತ ಮಹೋತ್ಸವ ಆಚರಿಸುತ್ತಿರುವ ವಿಟಿಯುನಲ್ಲಿ ಈ ರಾಷ್ಟ್ರೀಯ ಸಮ್ಮೇಳನ ನಡೆಸಲಾಗುತ್ತಿದೆ. ಎನ್‌ಇಪಿ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳು ಹಾಗೂ ಅವುಗಳನ್ನು ಬಗೆಹರಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.
ಅವಶ್ಯವಿರುವ ಅಧ್ಯಾಪಕರ ತರಬೇತಿ ಕುರಿತು ಯೋಜನೆ ಸಮ್ಮೇಳನದಲ್ಲಿ ಸಿದ್ಧಪಡಿಸಲಾಗುವುದು. ಸೃಜನಾತ್ಮಕ ಕಲಿಕೆ, ಬಹುಶಿಸ್ತೀಯ ಕಲಿಕೆ ಮತ್ತು ವಿದ್ಯಾರ್ಥಿ ಸ್ನೇಹಿ ಮಾರ್ಗದರ್ಶಕನ ಪಾತ್ರವನ್ನು ಶಿಕ್ಷಕರು ಸರಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಯತ್ನಿಸಲಾಗುವುದು ಎಂದರು.
ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ(ಉತ್ತರ) ಅಧ್ಯಕ್ಷ ಡಾ| ಸತೀಶ ಜಿಗಜಿನ್ನಿ, ಕಾರ್ಯದರ್ಶಿ ಡಾ|ಗಿರೀಶ ತೆಗ್ಗಿನಮಠ, ವಿಟಿಯು ಕುಲಸಚಿವ ಪ್ರೋ| ಎ.ಎಸ್.ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿದ್ದರು.