Advertisement
ಶಿಬಿರದಲ್ಲಿ 16 ಮಂದಿ ರಿಕರ್ವ್ ಬಿಲ್ಗಾರರು, 4 ತರಬೇತುದಾರರು ಮತ್ತು ಇಬ್ಬರು ಸಹಾಯಕ ಸಿಬಂದಿ ಇರುತ್ತಾರೆ. 2021ರ ಟೋಕಿಯೊ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸುವುದು ಈ ಶಿಬಿರದ ಪ್ರಮುಖ ಉದ್ದೇಶ. ಈಗಾಗಲೇ ಪುರುಷರ ತಂಡ ಒಲಿಂಪಿಕ್ ಅರ್ಹತೆ ಗಳಿಸಿದೆ. ಆದರೆ ವನಿತಾ ತಂಡಕ್ಕೆ ಇನ್ನೂ ಅರ್ಹತೆ ಸಿಕ್ಕಿಲ್ಲ. ಪ್ಯಾರಿಸ್‌ನಲ್ಲಿ ನಡೆಯುವ ಮುಂದಿನ ವರ್ಷದ ಅರ್ಹತಾ ಸುತ್ತಿನಲ್ಲಿ ಅದೃಷ್ಟ ಒಲಿಯುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಅಭ್ಯಾಸ ಶಿಬಿರಕ್ಕೆ ಆಹ್ವಾನಿಸಲ್ಪಟ್ಟ ಬಿಲ್ಗಾರರೆಂದರೆ ತರುಣ್‌ದೀಪ್ ರಾಯ್, ಅತನು ದಾಸ್, ಬಿ. ಧೀರಜ್, ಪ್ರವೀಣ್ ಜಾಧವ್, ಜಯಂತ್ ತಾಲೂಕಾªರ್, ಸುಖಮಣಿ ಬಾಬ್ರೇಕರ್, ಕಪಿಲ್, ವಿಶ್ವಾಸ್, ದೀಪಿಕಾ ಕುಮಾರಿ, ಅಂಕಿತಾ ಭಕತ್, ಎಲ್. ಬೊಂಬಾ ದೇವಿ, ರಿಧಿ, ಮಧು ವೇದ್ವಾನ್, ಹಿಮಾನಿ, ಪ್ರಮೀಳಾ ಬಾರಿಯಾ ಮತ್ತು ತಿಶಾ ಸಂಚೇತಿ. ಮುಂದಾಗಿ ಪುಣೆಗೆ ಆಗಮಿಸಲಿರುವ ಇವರೆಲ್ಲ ಕ್ವಾರಂಟೈನ್ ಅವಧಿಯನ್ನು ಪೂರೈಸಿದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಸಾಯ್ ತಿಳಿಸಿದೆ.