Advertisement

ನರ್ಮ್: ಮರಳಿ ಆರ್‌ಟಿಗೆ

07:35 AM Jul 20, 2017 | Harsha Rao |

ಉಡುಪಿ: ಇತ್ತೀಚೆಗೆ ಜೆನರ್ಮ್ ಬಸ್‌ಗಳ 55 ಪರವಾನಿಗೆ ರದ್ದು ಗೊಳಿಸಿದ ಹೈಕೋರ್ಟ್‌ ತೀರ್ಪಿಗೆ ಕೆಎಸ್ಸಾರ್ಟಿಸಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯದ ವಿಭಾಗೀಯ ಪೀಠ ವಜಾಗೊಳಿಸಿದೆ. ಪರ್ಮಿಟ್‌ಗಳ ಪುನರ್‌ ಪರಿಶೀಲನೆಗೆ ಆರ್‌ಟಿಎಗೆ ವಹಿಸಲಾಗಿದ್ದು, 6 ವಾರಗಳ ಅವಧಿ ನೀಡಲಾಗಿದೆ. ನಮಗಿನ್ನೂ ತೀರ್ಪಿನ ಪ್ರತಿ ಬಂದಿಲ್ಲ. ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ. “ನ್ಯಾಯಾಲಯದ ಆದೇಶವನ್ನು ಜಿಲ್ಲಾಡಳಿತ ಪಾಲಿಸಬೇಕು ಇಲ್ಲವೆ ಸಾರಿಗೆ ಪ್ರಾಧಿಕಾರ ಆದೇಶವನ್ನು ಜಾರಿಗೊಳಿಸಬೇಕು’ ಎಂದು ಖಾಸಗಿ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದ್ದಾರೆ. 

Advertisement

ಇತ್ತೀಚೆಗೆ ಉಚ್ಚ ನ್ಯಾಯಾಲಯದ ತೀರ್ಪು ಬಂದಾಗ ಕೆಎಸ್ಸಾರ್ಟಿಸಿಯ 4 ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ಪಾಸುಗಳನ್ನು ವಿತರಿಸಿರುವು ದರಿಂದ ನರ್ಮ್ ಬಸ್‌ ನಿಲುಗಡೆಗೊಳಿಸಿದರೆ ಸಮಸ್ಯೆ ಎದುರಾಗುತ್ತದೆ.

ತಾತ್ಕಾಲಿಕ ಪರವಾನಿಗೆ: ಪುನರ್‌ ಪರಿಶೀಲನೆಗೆ ಆರ್‌ಟಿಎಗೆ ನೀಡಿರುವುದ ರಿಂದ ನಮಗೆ ಮತ್ತೂಂದು ಅವಕಾಶ ಸಿಕ್ಕಿದೆ. ರದ್ದಾಗಿರುವ ಪರ್ಮಿಟ್‌ಗಳ ಬದಲಿಗೆ ತಾತ್ಕಾಲಿಕ ಪರ್ಮಿಟ್‌ ಪಡೆದುಕೊಂಡು ಬಸ್‌ಗಳನ್ನು ಓಡಿಸುತ್ತೇವೆ. ಇದು ಜನಪರವಾಗಿಯೇ ಇದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next