Advertisement

PM Caresಗೆ ಕಾರ್ಪೊರೇಟ್‌ ಬಲ; ಕೋವಿಡ್ ನಿರ್ವಹಣಾ ನಿಧಿಗೆ ಹೆಚ್ಚಿನ ದೇಣಿಗೆಗೆ ಕೇಂದ್ರದ ಕ್ರಮ

04:07 AM May 29, 2020 | Hari Prasad |

ಹೊಸದಿಲ್ಲಿ: ಕೋವಿಡ್ ಪರಿಸ್ಥಿತಿ ನಿರ್ವಹಣೆಗಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಗೆ ಕಾರ್ಪೊರೇಟ್‌ ವಲಯಗಳ ದೇಣಿಗೆ ಹರಿದು ಬರಲು ಇದ್ದ ಅಡಚಣೆಗಳನ್ನು ಸರಿಪಡಿಸುವ ಸಲುವಾಗಿ ಕೇಂದ್ರ ಸರಕಾರ, ಕಾರ್ಪೊರೇಟ್‌ ನಿಯಮಗಳಿಗೆ ತಿದ್ದುಪಡಿ ತಂದಿದೆ.

Advertisement

ಹೊಸ ತಿದ್ದುಪಡಿಯು, ಮೇ 28ರಿಂದ ಜಾರಿಗೊಳ್ಳಲಿದೆ ಎಂದು ಸರಕಾರ ತಿಳಿಸಿದೆ. 2013ರ ಕಾರ್ಪೊರೇಟ್‌ ಕಾಯ್ದೆಯು, ದೇಶದ ದೊಡ್ಡ ಖಾಸಗಿ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ ಸಮಾಜ ಸೇವೆಗಳನ್ನು ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ಜೊತೆಗೆ, ತುರ್ತು ಸಂದರ್ಭಗಳಲ್ಲಿ ಸರ್ಕಾರಕ್ಕೆ ದೇಣಿಗೆ ನೀಡಲು ಅವುಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಈವರೆಗೆ ಕಾಯ್ದೆಯ 467ನೇ ನಿಯಮದ ಒಂದನೇ ನಿಯಮವು ಕಾರ್ಪೊರೇಟ್‌ ದೇಣಿಗೆಯನ್ನು ‘ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ’ಗೆ ಮಾತ್ರ ಸೀಮಿತಗೊಳಿಸಿದೆ, ಹಾಗಾಗಿ, ಅದನ್ನು ಬದಲಾಯಿಸಲಾಗಿದೆ

ಕಾರ್ಪೊರೇಟ್‌ ಕಂಪನಿಗಳು ತಮ್ಮ ದೇಣಿಗೆಯನ್ನು ಇನ್ನು ಮುಂದೆ ಪಿಎಂ ಕೇರ್ಸ್ ಗೂ ನೀಡುವಂತೆ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಯಿಂದಾಗಿ, ದೇಶದಲ್ಲಿ ಕೋವಿಡ್ ಭೀತಿ ಆವರಿಸಿದ ನಂತರ, ಪಿಎಂ ಕೇರ್ಸ್ ಗಾಗಿ ಕಳೆದೆರಡು ತಿಂಗಳುಗಳಲ್ಲಿ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳು ಮಾಡಿರುವ ದೇಣಿಗೆಗಳು ಸಿಎಸ್‌ಆರ್‌ ವ್ಯಾಪ್ತಿಗೆ ಒಳಪಡಲಿವೆ.

ವಿರೋಧಕ್ಕೆ ಕಾರಣವಾದ ತಿದ್ದುಪಡಿ
ಸಿಎಸ್‌ಆರ್‌ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಪಿಎಂ ಕೇರ್ಸ್ ಗೆ ಕಾರ್ಪೊರೇಟ್‌ ದೇಣಿಗೆಗಳು ಹರಿದುಬರುವಂತೆ ಮಾಡಿರುವುದನ್ನು ವಿಪಕ್ಷಗಳು ಖಂಡಿಸಿವೆ.

Advertisement

ಈ ಮೊದಲು ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿ ಇರುವುದರ ಜೊತೆಗೆ, ಪಿಎಂ ಕೇರ್ಸ್ ಎಂಬ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

ಆದರೀಗ, ಆ ನಿಧಿಗೆ “ಪಿಎಂ ಕೇರ್ಸ್’ ಕಾರ್ಪೊರೇಟ್‌ ವಲಯದ ದೇಣಿಗೆ ಬರುವಂತೆ ಮಾಡಿರುವುದಕ್ಕೂ ವಿರೋಧ ವ್ಯಕ್ತಪಡಿಸಿವೆ. ಆದರೆ, ಈ ಕ್ರಮವನ್ನು ಕೇಂದ್ರದ ಅಧಿಕಾರಿ ಸಮರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next