Advertisement

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

12:40 AM Nov 24, 2024 | Team Udayavani |

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಗಂಭೀರ ಮಟ್ಟಕ್ಕೆ ಏರಿದ್ದು, ಎಕ್ಯೂಐ 420 ಇದೆ. ದಿಲ್ಲಿಯ ಆನಂದ್‌ ವಿಹಾರದಲ್ಲಿ ಅತೀಹೆಚ್ಚು 457 ಎಕ್ಯೂಐ ದಾಖಲಾಗಿದೆ. ಜತೆಗೆ ಈ ಮಾಲಿನ್ಯ ಹೆಚ್ಚಳ ಮನುಷ್ಯರಿಗಿಂತಲೂ ಹೆಚ್ಚು ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತಿದೆ.

Advertisement

ಪ್ರಾಣಿಗಳು ಶ್ವಾಸ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೆಮ್ಮು, ನೆಗಡಿ, ವಾಂತಿ, ಬೇಧಿ ಮತ್ತು ಎದೆ ನೋವಿಗೆ ತುತ್ತಾಗಿವೆ ಎಂದು ಪ್ರಾಣಿತಜ್ಞರು ಹೇಳಿದ್ದಾರೆ. ಇನ್ನು ದಿಲ್ಲಿಯಲ್ಲಿ ವಾಹನಗಳ ಇಂಧನದ ಪ್ರಕಾರಗಳನ್ನು ಪತ್ತೆಹಚ್ಚಲು ಸಹಾಯ ವಾಗುವಂತೆ ಮಾಲಕರು ತಮ್ಮ ವಾಹನ ಗಳಿಗೆ ಕಡ್ಡಾಯವಾಗಿ ಸಾಂಕೇತಿಕ ಬಣ್ಣಗಳ ಸ್ಟಿಕ್ಕರ್‌ಗಳನ್ನು ಅಂಟಿಸಲು ದಿಲ್ಲಿ ಸಾರಿಗೆ ಇಲಾಖೆ ಆದೇಶಿಸಿದೆ. ಅಲ್ಲದೇ ನಿಯಮ ಉಲ್ಲಂ ಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next