Advertisement

ಸಚಿವ ಸ್ಥಾನ: ಮುನಿರತ್ನ, ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ ಸಚಿವ ನಾರಾಯಣ ಗೌಡ

05:12 PM Jul 01, 2021 | Team Udayavani |

ಮೈಸೂರು: ಶಾಸಕ ಮುನಿರತ್ನ ವಿರುದ್ಧದ ಪ್ರಕರಣ ಈಗಾಗಲೇ‌ ಇತ್ಯರ್ಥವಾಗಿದೆ. ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ಕ್ಲಿಯರ್ ಆಗಲಿದೆ. ಹಾಗಾಗಿ ಮುನಿರತ್ನ ಮತ್ತು ರಮೇಶ್ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು ಎಂದು ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಇದನ್ನೂ ಓದಿ:ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು‌ ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ

ಬಿಜೆಪಿ ಪಾಳಯದ ಹಲವರ ದೆಹಲಿ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಾರ್ಯಾರೋ ದೆಹಲಿಗೆ ಹೋಗಿ ಬಂದಿದ್ದಾರೆ‌. ದೆಹಲಿ ಪ್ರವಾಸ ಮಾಡಬಾರದೆಂದು ನಿಯಮ ಇದೆಯೇ. ಅವರವರ ಕೆಲಸಕ್ಕೆ ಹೋಗಿ ಬಂದಿದ್ದಾರೆ‌ ಎಂದರು.

ರಮೇಶ್ ಜಾರಕಿಹೊಳಿಯವರಿಗೆ ಮುಂಬೈನಲ್ಲಿ ಸ್ವಂತ ಮನೆ ಇದೆ. ಅವರು ಅಲ್ಲೇ ಕಚೇರಿ ಮಾಡಿದ್ದಾರೆ. ಅವರ ಮನೆಯಿರು ಪ್ರದೇಶದಲ್ಲೇ ದೇವೇಂದ್ರ ಫಡ್ನವೀಸ್ ಮನೆ ಇದೆ. ಹೀಗಾಗಿ ಆಗಾಗ್ಗೆ ಫಡ್ನವೀಸ್-,ಜಾರಕಿಹೊಳಿ ಭೇಟಿ ಆಗುತ್ತಾರೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

Advertisement

ಮಂಡ್ಯದಲ್ಲಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧದ ಕುರಿತು ಮಾತನಾಡಿದ ಅವರು, ಕೆಲವರು ನೂರು ಕಿಟ್ ಕೊಡಲು ಸಾವಿರ ಜನರನ್ನು ಸೇರಿಸಿಕೊಂಡು ರಾಜಕಾರಣ ಮಾಡುತ್ತಾರೆ. ಕೋವಿಡ್ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ‌. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಕಾ. ಅದಕ್ಕಾಗಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದರು.

ಕೆಆರ್‌ಎಸ್ ಜಲಾಶಯದಲ್ಲಿ ಬಿರುಕು ವದಂತಿ ಬಗ್ಗೆ ಮಾತನಾಡಿದ ಸಚಿವರು, ಜಲಾಶಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ‌. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next