Advertisement

ಹೈಟಿ ಸಂತ್ರಸ್ತರಿಗೆ ನವೋಮಿ ಒಸಾಕಾ ಆರ್ಥಿಕ ನೆರವು

10:35 PM Aug 15, 2021 | Team Udayavani |

ಟೋಕಿಯೊ : ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳ ಒಡತಿ, ಜಪಾನಿನ ನವೋಮಿ ಒಸಾಕಾ ಮತ್ತೂಮ್ಮೆ ಸುದ್ದಿಯಾಗಿದ್ದಾರೆ. ಇದು ಆರ್ಥಿಕ ನೆರವಿಗೆ ಮುಂದಾಗುವ ಮೂಲಕ.

Advertisement

ಮುಂದಿನ ವಾರ ನಡೆಯುವ “ವೆಸ್ಟರ್ನ್ ಆ್ಯಂಡ್‌ ಸದರ್ನ್ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ತನಗೆ ಲಭಿಸುವ ಎಲ್ಲ ಮೊತ್ತವನ್ನು ಹೈಟಿ ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಒಸಾಕಾ ಹೇಳಿದ್ದಾರೆ.

ಕೆರಿಬಿಯನ್‌ ದ್ವೀಪದಲ್ಲಿ ಶನಿವಾರ ಸಂಭವಿಸಿದ ಈ ವಿನಾಶಕಾರಿ ಭೂಕಂಪದಲ್ಲಿ ಕನಿಷ್ಠ 304ರಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ.

ನವೋಮಿ ಒಸಾಕಾ ಅವರ ತಂದೆ ಹೈಟಿ ದ್ವೀಪದವರು.

ಇದನ್ನೂ ಓದಿ :ಜರ್ಮನಿಯ ಫುಟ್ ಬಾಲ್ ಲೆಜೆಂಡ್‌ ಗರ್ಡ್‌ ಮುಲ್ಲರ್‌ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next