Advertisement
ಬೆಂಗಳೂರಿನಲ್ಲಿ ಸರಿಸುಮಾರು 15 ಲಕ್ಷದಷ್ಟು ಕರಾವಳಿಯ ಜನರಿದ್ದು ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿ¨ªಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯ ಇದರ ಉದ್ದೇಶವಂತೆ.
Related Articles
Advertisement
ಎರಡನೇ ದಿನ ಅಪರೂಪದ ಜನಪದ ಕ್ರೀಡೆಗಳಿಗೆ ವೇದಿಕೆ-ಬಯಲಾಟ. ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಲಗೋರಿ, ಹಗ್ಗ ಜಗ್ಗಾಟ ಹಾಗು ಇತರೇ ಕರಾವಳಿಯ ಗ್ರಾಮೀಣ ಕ್ರೀಡೆಗಳು ಇರಲಿವೆ. ವಿವಿಧ ವಯೋಮಾನದ ಎರಡು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೊರನಾಡಿನ ಯುವ ಉದ್ಯಮಿ ವಕ್ವಾಡಿ ಪ್ರವೀಣ ಶೆಟ್ಟಿ ಅವರಿಗೆ ಸಾಧನೆಗಾಗಿ “ಕಿರೀಟ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸೂÅರು ಸಂಯೋಜನೆಯಲ್ಲಿ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್ ಬಂದಿ, ಡ್ರಾಮಾ ಜೂನಿಯರ ಖ್ಯಾತಿಯ ಅಚಿಂತ್ಯ, ಮಹೇಂದ್ರ, ತುಷಾರ್, ಸೂರಜ್ ಅವರಿಂದ ನಮ್ಮೂರ್ ಡ್ರಾಮಾ, ಅಂತರರಾಷ್ಟ್ರೀಯ ಖ್ಯಾತಿಯ ಸರವಣ ಧನಪಾಲ್ ಅವರ ವಿಶೇಷ ನೃತ್ಯ, ಕರಾವಳಿಯ ಅಂತರರಾಷ್ಟ್ರೀಯ ಪ್ರತಿಭೆಗಳಿಂದ ನೃತ್ಯೋತ್ಸವ ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಇರಲಿವೆ.
ಚಪ್ಪರದ ವೇದಿಕೆಯಲ್ಲಿ ಸುಗಮ ಸಂಗೀತ, ಕುಡುಂಬಿ ಜನಾಂಗದ ಕಾರ್ಯಕ್ರಮ, ಜ್ಯೂಸು ತಯಾರಿಕಾ ಪ್ರಾತ್ಯಕ್ಷಿಕೆ , ಕೊರಗರಿಂದ ಕಾರ್ಯಕ್ರಮ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ ನಡೆಯಲಿವೆ.
ಜೊತೆಗೆ ನಮ್ಮೂರ ಹಬ್ಬದ ಎರಡು ದಿನ ಕೂಡ ಗಾಳಿಪಟ ಉತ್ಸವ, ಫೋಟೋ ಸಂತೆ ಮತ್ತು ಕಾಟೂìನು ಹಬ್ಬವು ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದೆ. ಈ ಎಲ್ಲ ಮನರಂಜನೆಯ ಜೊತೆಗೆ ನಮ್ಮೂರ ಹಬ್ಬದಲ್ಲಿ ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದÇÉೇ ತಯಾರಿಸುವ ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ನಮ್ಮೂರ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ಹಾಗು ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳು ಕೂಡ ಲಭ್ಯವಿರುತ್ತದೆ.
ಎಲ್ಲಿ?: ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ, ಶಾಲಿನಿ ಗ್ರೌಂಡ್, ಜಯನಗರದ 5ನೇ ಹಂತಯಾವಾಗ?: ಜ, 21 ಮತ್ತು 22, ಶನಿವಾರ, ಭಾನುವಾರ, ಬೆಳಿಗ್ಗೆ 10 ರಿಂದ ರಾತ್ರಿ 10ರವರೆಗೆ
ಪ್ರವೇಶ: ಉಚಿತ