Advertisement

OTT: ಹೊಸ ಓಟಿಟಿ ಪ್ಲೇಯರ್‌ ಆರಂಭ

03:49 PM Oct 31, 2024 | Team Udayavani |

ಓಟಿಟಿಯಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ನಿರ್ಮಾಪಕರು ಕೂಡಾ ಓಟಿಟಿ ಸಿನಿಮಾ ಖರೀದಿ ಮಾಡಿ, ಪ್ರದರ್ಶಿಸಲಿ ಎಂದು ಬಯಸುತ್ತಿದ್ದಾರೆ. ಈಗ ಹೊಸ ಓಟಿಟಿಯೊಂದು ಸಿದ್ಧವಾಗಿದೆ. ಅದೇ ಓಟಿಟಿ ಪ್ಲೇಯರ್‌.

Advertisement

ಇದು ಆ್ಯಪ್‌ ಅಲ್ಲ, ಹಾರ್ಲಿ ಎಂಟರ್‌ಟೈನ್‌ಮೆಂಟ್‌ ಮೀಡಿಯಾ ಸಂಸ್ಥೆಯಡಿ ಗೀತಾ ಕೃಷ್ಣನ್‌ ರಾವ್‌ ಹಾಗೂ ಮುರಳಿರಾವ್‌ ಅವರು ಅಭಿವೃದ್ದಿಪಡಿಸಿರುವ ವೆಬ್‌ಸೈಟ್‌ ಆಗಿದ್ದು ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ನಿರ್ದೇಶಕ, ನಿರ್ಮಾಪಕರಾದ ಓಂ ಸಾಯಿಪ್ರಕಾಶ್‌ ಹಾಗೂ ಎಸ್‌.ಎ.ಚಿನ್ನೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಮುರಳಿರಾವ್‌, “ಇದೊಂದು ಪ್ರಯೋಗ, ಪ್ರಯತ್ನ. ನಮ್ಮ ವೆಬ್‌ ಸೈಟ್‌ ಗೆ ಲಾಗಿನ್‌ ಆಗಿ ಅಲ್ಪದರ ಪಾವತಿಸಿ ಹೊಸಚಿತ್ರಗಳನ್ನು ನೋಡಬಹುದು. ಇದನ್ನು ಆನ್‌ ಲೈನ್‌ ಥೇಟರ್‌ ಅನ್ನಬಹುದು. ಬಂದ ಹಣದಲ್ಲಿ ನಿರ್ಮಾಪಕರಿಗೆ ಶೇ 70 ಶೇರ್‌ ಕೊಡು ತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್‌ ಸೈಟ್‌ನಲ್ಲಿ ಹಾಕುತ್ತೇವೆ’ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next