ಬೆಂಗಳೂರು: ಲಾಕ್‌ಡೌನ್‌ನಿಂದ ಉಂಟಾದ ತೀವ್ರ ಆರ್ಥಿಕ ಸಂಕಷ್ಟದ ನೆಪದಲ್ಲಿ “ನಮ್ಮ ಮೆಟ್ರೋ’ ಈ ಹಿಂದೆ ಕರೆದಿದ್ದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲುಮುಂದಾಗಿದೆ. ಈ ಮೂಲಕ ನೂರಾರು ಅಭ್ಯರ್ಥಿಗಳ ಕನಸಿಗೆ ತಣ್ಣೀರೆರಚಿದಂತಾಗಿದೆ.
2019ರ ಜನವರಿಯಲ್ಲೇ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ 174 ವಿವಿಧ ಹುದ್ದೆಗಳ ನೇಮಕಾತಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಅರ್ಜಿ ಆಹ್ವಾನಿಸಿತ್ತು. ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ತದನಂತರ2019ರ ಮೇನಲ್ಲಿ ಅಭ್ಯರ್ಥಿಗಳ ಅಂಕಗಳ ಪಟ್ಟಿಯೂ ಬಿಡುಗಡೆ ಯಾಡಿತ್ತು. ಇದಾದ ಮೇಲೆ ಇಡೀ ಪ್ರಕ್ರಿಯೆ ನೇಪಥ್ಯಕ್ಕೆ ಸರಿ ದಿತ್ತು.ಈಮಧ್ಯೆ ಕೋವಿಡ್ ದಿಂದ ಲಾಕ್‌ಡೌನ್ ಜಾರಿಯಾಗಿತ್ತು. ಈಗ ಈ ನೆಪ ಮುಂದಿಟ್ಟು ಹೊರ ಗುತ್ತಿಗೆಗೆ ಸಂಬಂಧಿಸಿದ ಚಟುವಟಿಕೆ ಚುರುಕುಗೊಳಿಸಿ, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಚಿಂತನೆ ನಡೆದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಪರೀಕ್ಷೆ ನಡೆಸಿತ್ತು. ಸುಮಾರು 40 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈಗಾಗಲೇ ಅಂಕಪಟ್ಟಿ ಬಿಡುಗಡೆ ಮಾಡಿದ್ದರಿಂದ ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಬಿಎಂಆರ್‌ಸಿಎಲ್‌ಗೆ ದುಂಬಾಲು ಬಿದ್ದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಬಗ್ಗೆ ಪೂರಕ ಸ್ಪಂದನೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕೇಂದ್ರ ವಸತಿ ಮತ್ತು ನಗರಾಭಿ ವೃದ್ಧಿ ಸಚಿವಾಲಯದ ಮೊರೆಹೋಗಿದ್ದರು.
ಸ್ಪಂದಿಸಿದ ಸಚಿವಾಲಯವು, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ಹಲವು ಬಾರಿಗೆ ಸೂಚನೆ ನೀಡಿದೆ. ಜತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ “ತಕ್ಷಣ ತಾತ್ಕಾಲಿಕಆಯ್ಕೆ ಪಟ್ಟಿ ಪ್ರಕಟಿಸುವಂತೆ’ ನಿಗಮಕ್ಕೆ ಪತ್ರ ಬರೆದಿದ್ದಾರೆ.ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ನಿಗಮವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ. ಶೀಘ್ರ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಮೂಲಗಳು”ಉದಯವಾಣಿ’ಗೆ ತಿಳಿಸಿವೆ.
ನಷ್ಟಕ್ಕೂ ನೇಮಕಾತಿಗೂ ಸಂಬಂಧ ಇಲ್ಲ : “ನಿಗಮ ಈಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೂ ನೇಮಕಾತಿ ಪ್ರಕ್ರಿಯೆಗೂ ಸಂಬಂಧವೇ ಇಲ್ಲ.ಯಾಕೆಂದರೆ, ಅರ್ಜಿ ಆಹ್ವಾನಿಸಿದ್ದು 2019ರ ಜನವರಿಯಲ್ಲಿ. ಪರೀಕ್ಷೆ ಬರೆದಿದ್ದು ಅದೇ ವರ್ಷ ಫೆಬ್ರವರಿಯಲ್ಲಿ. ಒಂದೂವರೆ ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.ಕಳೆದ ಬಾರಿ ಮೇನಲ್ಲಿಕೇಳಿದಾಗ,2019ರ ವಷಾಂತ್ಯಕ್ಕೆಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್ ನಡುವಿನ ಮಾರ್ಗ ಪೂರ್ಣಗೊಳ್ಳಲಿದೆ. ಆಗ ನೇಮಕ ಮಾಡಿಕೊಳ್ಳುವುದಾಗಿ ನಿಗಮ ಹೇಳಿತ್ತು. ಇದಾದ ನಂತರ 2020ರ ಫೆಬ್ರವರಿ ತೋರಿಸಿದರು. ಆಮೇಲೆ ಲಾಕ್‌ಡೌನ್ ಜಾರಿಯಾಯಿತು. ಈಗ ಆರ್ಥಿಕ ನಷ್ಟದ ನೆಪ ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಹೊರಗುತ್ತಿಗೆಗೆ ಮೆಟ್ರೋ ಒಲವು : ಮತ್ತೂಂದೆಡೆಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸಂಪೂರ್ಣ ಹೊರಗುತ್ತಿಗೆ ನೀಡುವ ಪ್ರಕ್ರಿಯೆಗೆಚಾಲನೆದೊರೆತಿದ್ದು, ಸೋಮವಾರಬಿಎಂ ಆರ್‌ಸಿಎಲ್ ಉನ್ನತ ಅಧಿಕಾರಿಗಳು,ಕೆಲಕಂಪನಿಗಳ ಜತೆ ಸಭೆ ನಡೆಸಲಾಯಿತು. ಈ ವೇಳೆ ನಮ್ಮ ಮೆಟ್ರೋ 2ನೇಹಂತದಲ್ಲಿ ಜಾರಿಗೆ ತರಲಿದ್ದು ಸಾಧಕ-ಬಾಧಕಗಳ ಕುರಿತು ವಿವಿಧಕಂಪನಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು.ಈ ಕ್ರಮದಿಂದಇನ್ಮುಂದೆಕಾಯಂ ನೇಮಕಾತಿಇರಲ್ಲ. ವೇತನಆಯೋಗದಅನ್ವಯ ಸಂಬಳ,ಭತ್ಯೆ ಮತ್ತಿತರ ಸೌಲಭ್ಯ ಸೇರಿ ಶೇ. 60ರಷ್ಟು ವೆಚ್ಚ ತಗ್ಗಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ ಎಂದುಅಧಿಕಾರಿಯೊಬ್ಬರು ಮಾಹಿತಿ ನೀಡಿದರು. “ಈಗಾಗಲೇಹಲವುಬಾರಿಮನವಿ ಮಾಡಿದ್ದೇವೆ.ಕೇಂದ್ರ ಸಚಿವಾಲಯ ಸೂಚಿಸಿದರೂ ಬಿಎಂಆರ್‌ಸಿಎಲ್ ಸ್ಪಂದಿಸಿಲ್ಲ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದರೆ, ಹೋರಾಟನಡೆಸಲಾಗುವುದು’ ಎಂದುಅಭ್ಯರ್ಥಿಗಳು ಎಚ್ಚರಿಸಿದ್ದಾರೆ.
-ವಿಜಯಕುಮಾರ್ ಚಂದರಗಿ