Advertisement

ಸ್ಥಳೀಯ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾ ರಾವ್‌

01:16 AM Apr 09, 2022 | Team Udayavani |

ಮಣಿಪಾಲ: ಬೀಚ್‌, ಪಶ್ಚಿಮ ಘಟ್ಟ, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಪ್ರವಾಸಿ ಸ್ಥಳಗಳಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೂ ಹೆಚ್ಚೆಚ್ಚು ಉತ್ತೇಜನ ಸಿಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಹೇಳಿದರು.

Advertisement

ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯು ನಿಕೇಶನ್‌ (ಎಂಐಸಿ)ನಲ್ಲಿ ಕಾರ್ಪೊ ರೇಟ್‌ ಕಮ್ಯುನಿಕೇಶನ್‌ ವಿಭಾಗ ದಿಂದ ಹಮ್ಮಿಕೊಂಡಿರುವ ನಮ್ಮ ಅಂಗಡಿ 19ನೇ ವರ್ಷದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಇದೊಂದು ಮಾದರಿ ಕಾರ್ಯಕ್ರಮ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಮಾರ್ಕೆಟಿಂಗ್‌ ಮಾಡಲು ಹೆಚ್ಚು ಅನುಕೂಲವಾಗಲಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಜಿಲ್ಲೆಯ ಕೊರಗ ಸಮುದಾಯದವರು ಬಿದಿರನ್ನು ಬಳಸಿ ಅತ್ಯುತ್ತಮ ವಾದ ಕಲಾಕೃತಿ, ಉತ್ಪನ್ನಗಳನ್ನು ರಚಿಸು ತ್ತಾರೆ. ಅದರ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗುತ್ತಿಲ್ಲ. ಉತ್ಪನ್ನ ಸಿದ್ಧಪಡಿಸುವುದು ಮತ್ತು ಮಾರುಕಟ್ಟೆ ವ್ಯವಸ್ಥೆ ನಡುವೆ ನಿರ್ಮಾಣವಾಗಿರುವ ಅಂತರ ಸರಿಪಡಿಸುವ ಕಾರ್ಯ ಆಗಬೇಕು ಎಂದರು.

ಪರಿಸರ ಸ್ನೇಹಿ
ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಮಾತನಾಡಿ, ಕೊರೊನಾ ದಿಂದ ಒಂದು ವರ್ಷ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಮಾಡಿದಾಗಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ನಮ್ಮ ಅಂಗಡಿ ಪ್ರದರ್ಶನ ಮೇಳವು ವಿದ್ಯಾರ್ಥಿ ಗಳ ಸೃಜನಶೀಲತೆ, ಟೀಮ್‌ ವರ್ಕ್‌ ಮತ್ತು ಇವೆಂಟ್‌ ಮ್ಯಾನೇಜ್ಮೆಂಟ್ ಕಲಿಕೆಗೆ ಪೂರಕ ವಾಗಿದೆ. ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಲೋಕಲ್‌ ಫಾರ್‌ ಓಕಲ್‌ಗೆ ಉತ್ತೇಜನ ನೀಡುತ್ತಿದ್ದೇವೆ ಎಂದರು.

ಸಿಡಬ್ಲ್ಯೂಸಿ ಸಹಾಯಕ ನಿರ್ದೇಶಕ ಶಿವಾನಂದ ಶೆಟ್ಟಿ ಮಾತನಾಡಿ, ದೇಶದಲ್ಲಿ ಕೌಶಲಾಧಾರಿತ ಮಾನವ ಸಂಪನ್ಮೂಲದ ಕೊರತೆಯಿದೆ. ಮಾರು ಕಟ್ಟೆ ಮತ್ತು ಸಾಮಾಜಿಕ ಮಾನ್ಯತೆ ಉದ್ಯೋಗದಲ್ಲಿ ಅತಿ ಆವಶ್ಯಕ. ತಂತ್ರಜ್ಞಾನ ಹಳ್ಳಿ ಮತ್ತು ಅಗತ್ಯ ಇರುವವರಿಗೆ ತಲುಪಬೇಕು ಎಂದು ಹೇಳಿದರು.

Advertisement

ಕಾರ್ಯಕ್ರಮ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸೌಪರ್ಣಿಕಾ ಅತ್ತಾವರ ಉಪಸ್ಥಿತರಿ ದ್ದರು. ವಿದ್ಯಾರ್ಥಿಗಳಾದ ಅನಘ… ಸ್ವಾಗತಿಸಿ, ಉರ್ಬಿ ವಂದಿಸಿದರು. ಹೃತಿಕ ಸಹಾಯ್‌ ಅವರು ನಿರೂಪಿಸಿದರು.

ನಮ್ಮ ಅಂಗಡಿಯಲ್ಲಿ..
ಮಣ್ಣು, ಮರದಿಂದ ಮಾಡಿದ ನಾನಾ ಬಗೆಯ ಕಲಾಕೃತಿಗಳು, ಪುರುಷರು, ಮಹಿಳೆಯರು ಮಕ್ಕಳ ಹಲವು ವಿನ್ಯಾಸದ ದಿರಿಸು ನಮ್ಮ ಅಂಗಡಿಯ ಪ್ರಮುಖ ಆಕರ್ಷಣೆಯಾಗಿವೆ. ವಿವಿಧ ಆಹಾರ ಪದಾರ್ಥಗಳು, ಕೇಶತೈಲ, ಡಿಟರ್ಜೆಂಟ್‌ ಇತ್ಯಾದಿಗಳ ವಿಭಾಗವೂ ಇಲ್ಲಿದ್ದು, ಎಲ್ಲರಿಗೂ ಮುಕ್ತ ಅವಕಾಶವಿದೆ.

 

Advertisement

Udayavani is now on Telegram. Click here to join our channel and stay updated with the latest news.

Next