Advertisement

ಮೈಸೂರು ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಿ

01:59 PM Jun 10, 2017 | |

ಮೈಸೂರು: ಶತಮಾನದ ಇತಿಹಾಸ ಕಂಡಿರುವ ಮೈಸೂರು ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿಶ್ವವಿದ್ಯಾನಿಲಯ ಎಂದು ನಾಮಕರಣ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌ ಒತ್ತಾಯಿಸಿದರು. ಮೈಸೂರು ವಿವಿ ವತಿಯಿಂದ ಕ್ರಾಫ‌ರ್ಡ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಒಡೆಯರ್‌ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಮಹಿಳೆಯರ ಏಳಿಗೆಗೆ ಶ್ರಮಿಸಿದ್ದರು ಎಂದರು.

Advertisement

ಅಲ್ಲದೆ ವಾಣಿವಿಲಾಸ ಆಸ್ಪತ್ರೆ, ರೇಷ್ಮೆ ನೇಯ್ಗೆ ಕಾರ್ಖಾನೆ ಸ್ಥಾಪನೆ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಮೈಸೂರು ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರನ್ನು ಇಡಬೇಕಿತ್ತು. ಮಾನಸಗಂಗೋತ್ರಿಯ ಮುಖ್ಯದ್ವಾರದಲ್ಲಿ ಕುವೆಂಪು ಪ್ರತಿಮೆ ಸ್ಥಾಪಿಸಲಾಗಿದೆ. ಒಂದೊಮ್ಮೆ ಕುವೆಂಪು ಬದುಕಿದ್ದರೆ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾದವರ ಕಪಾಳಕ್ಕೆ ಬಾರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಪ್ರತಿಮೆ ಸ್ಥಾಪಿಸುವಂತೆ ಹೇಳುತ್ತಿದ್ದರು. ಆದರೆ ಅದೃಷ್ಟವಶಾತ್‌ ವಿವಿ ಕಾರ್ಯಸೌಧದ ಎದುರು ಅವರ ಪ್ರತಿಮೆ ಸ್ಥಾಪಿಸಿರುವುದು ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿಗೆ ಇದೇ ಮೊದಲ ಬಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಏಕೆ ಇಷ್ಟು ವರ್ಷಗಳವರೆಗೆ ಆಚರಣೆ ಮಾಡಲಿಲ್ಲ ಎಂಬುದು ಪ್ರಶ್ನಾರ್ಥಕವಾಗಿದ್ದು, ಬಹುಶಃ ಬಹುಜನ ಚಳವಳಿ ಹುಟ್ಟದಿದ್ದರೆ ಕೆಲವು ವೈದಿಕ ಮನಸ್ಸುಗಳು ನಾಲ್ವಡಿ ಅವರನ್ನು ಪರಿಚಯಿಸದೆ, ಅವರನ್ನು ಕತ್ತಲಲ್ಲಿಯೇ ಇಡುವ ಪ್ರಯತ್ನ ಮಾಡುತ್ತಿದ್ದಮ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಮಾತನಾಡಿ, ಈ ಹಿಂದೆ ಮೈಸೂರು ವಿವಿ ಕ್ರಾಪರ್ಡ್‌ ಭವನದಲ್ಲಿ ವಿಶ್ರಾಂತ ಕುಲಪತಿಗಳ ಭಾವಚಿತ್ರವಿತ್ತು. ಆದರೆ ಇದೀಗ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಭಾವಚಿತ್ರವನ್ನು ಅಳವಡಿಸಲಾಗಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿವಿಯ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಹೆಸರನ್ನು ಮೈಸೂರು ವಿವಿಗೆ ನಾಮಕರಣ ಮಾಡುವ ನಿಟ್ಟಿನಲ್ಲಿ ಜೂ.22ರಂದು ಸಿಂಡಿಕೇಟ್‌ ಸಭೆ ಕರೆಯಲಾಗಿದ್ದು, ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು. ಮೈಸೂರು ವಿವಿ ಕುಲಸಚಿವೆ ಭಾರತಿ, ಪರೀûಾಂಗ ಕುಲಸಚಿವ ಪೊ.ಜೆ.ಸೋಮಶೇಖರ್‌ ಇದ್ದರು.

ದಾಖಲೆ ಇದ್ದರೆ ಪುರಾವೆ ಸಹಿತ ನಿರೂಪಿಸಿ: ಇತ್ತೀಚೆಗೆ ಪ್ರಕಟಗೊಂಡ ಪ್ರೊ.ಪಿ.ವಿ.ನಂಜರಾಜ ಅರಸು ಅವರ ನಾನು ಕನ್ನಂಬಾಡಿಕಟ್ಟೆ… ಹೀಗೊಂದು ಆತ್ಮಕಥೆ ಕೃತಿಯಲ್ಲಿ ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಕೃತಿ ಲೇಖಕ ಪ್ರೊ.ಪಿ.ವಿ.ನಂಜರಾಜ ಅರಸು ಇತಿಹಾಸವನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಸರ್‌ ಎಂ.ವಿಶ್ವೇಶ್ವರಯ್ಯ ಉತ್ತಮ ಜಾnನಿಯಾಗಿದ್ದು, ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಕನ್ನಂಬಾಡಿ ಕಟ್ಟೆ ನಿರ್ಮಾಣದಲ್ಲಿ 8 ಎಂಜಿನಿಯರ್‌ಗಳು ಕೆಲಸ ಮಾಡಿದ್ದು, ಅವರಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಸಹ ಒಬ್ಬರಾಗಿದ್ದಾರೆ.

Advertisement

ಕೆಂಗಲ್‌ ಹನುಮಂತಯ್ಯ ವಿಧಾನಸೌಧ ಕಟ್ಟಿದವರು ಅವರ ಹೆಸರನ್ನು ಹೇಳಲಿದ್ದು, ವಿಧಾನಸೌಧ ನಿರ್ಮಾಣಕ್ಕಾಗಿ ಶ್ರಮಿಸಿದವರ ಹೆಸರು ಹೊರ ಬರುವುದಿಲ್ಲ. ಅದೇ ರೀತಿಯಲ್ಲಿ ನಂಜರಾಜ ಅರಸು ತಮ್ಮ ಕೃತಿಯಲ್ಲಿ ವಾಸ್ತವ ಸತ್ಯ ಹೊರ ಹಾಕಿದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೃತಿ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಕೃತಿಯಲ್ಲಿರುವಂತೆ ಕೆಆರ್‌ಎಸ್‌ ಅಣ್ಣೆಕಟ್ಟೆ ಕಟ್ಟಿದವರು ಸರ್‌ ಎಂ.ವಿಶ್ವೇಶ್ವೇರಯ್ಯ ಅಲ್ಲ ಎಂಬ ಉಲ್ಲೇಖ ಸುಳ್ಳು ಎನ್ನುವವರು ದಾಖಲೆ, ಆಧಾರವಿದ್ದರೆ ಪುರಾವೇ ಸಹಿತ ನಿರೂಪಿಸಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next