Advertisement
ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾವಗೊಂಡಿತು.
Related Articles
Advertisement
ಸ್ನಾತಕೋತ್ತರ ಇಂಗ್ಲಿಷ್, ಹಿಂದಿ ಸಹಿತ ವಿವಿಧ ವಿಭಾಗಗಳ ಪಠ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ಸಂತ ಆನ್ಸ್ ಸ್ವಾಯತ್ತ ಸಂಸ್ಥೆಯಲ್ಲಿ ಸ್ನಾತಕ ಪದವಿಯಲ್ಲಿ ಕೋ-ಎಜುಕೇಶನ್ ಸಿಸ್ಟಮ್ ಅನುಮೋದನೆ ನೀಡಲಾ ಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಗಳಲ್ಲಿ ಉದ್ಯೋಗಾವಕಾಶ ಉದ್ಯಮಶೀಲತೆ, ಕೌಶಲ ಅಭಿವೃದ್ಧಿ ವಿಷಯಾಧಾರಿತ ಕೋರ್ಸ್‌ಗಳ ಪಟ್ಟಿಯನ್ನು ಅನುಮೋದಿಸಲಾಯಿತು.
ಆಡಳಿತ ವಿಭಾಗದ ರಿಜಿಸ್ಟ್ರಾರ್ ರಾಜು ಮೊಗವೀರ, ಪರೀûಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗದ ಅಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಮಕ್ಕಳೇ ಬೋಧಕರು!ಪ್ರೊ|ಪಿ.ಎಲ್.ಧರ್ಮ ಮಾತನಾಡಿ, ವಿವಿಯ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧಿಸುವ ವಿನೂತನ ಪ್ರಯತ್ನ ಕಳೆದ ಎರಡು ಸೆಮಿಸ್ಟರ್‌ಗಳಿಂದ ನಡೆಸಲಾಗುತ್ತಿದ್ದು, ಯಶಸ್ವಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಬೋಧನಾ ವೃತ್ತಿಯಲ್ಲಿ ತೊಡಗಿಸುವ ಆಸಕ್ತಿ ಹೊಂದಿರುವುದರಿಂದ ವಿದ್ಯಾರ್ಜನೆ ಅವಧಿಯಲ್ಲೇ ಬೋಧನೆಗೆ ಅವಕಾಶ ನೀಡಿದರೆ, ಭವಿಷ್ಯಕ್ಕೆ ಸುಲಭವಾಗಲಿದೆ. ಇದೇ ಮಾದರಿಯನ್ನು ಇತರ ವಿಭಾಗಗಳೂ ಅನುಸರಿಸಿದರೆ ಉತ್ತಮವಾಗುತ್ತದೆ ಎಂದು ಹೇಳಿದರು. ವಿವಿ ಸಂಯೋಜಿತ ಕಾಲೇಜು ಸಂಖ್ಯೆ ಇಳಿಕೆ!
ವಿವಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಒಟ್ಟು 174 ಕಾಲೇಜುಗಳ ಪೈಕಿ 12 ಕಾಲೇಜುಗಳು ವಿವಿಯ ಸಂಯೋಜನೆಗೆ ಒಳಪಡಲು ಅರ್ಜಿ ಸಲ್ಲಿಸಿರಲಿಲ್ಲ. ಈ ಸಂಖ್ಯೆ 162ಕ್ಕೆ ಇಳಿದಿತ್ತು. ಈ ಬಾರಿಯೂ ಹಲವು ಕಾಲೇಜುಗಳು ವಿವಿ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಈಗ ಒಟ್ಟು ಕಾಲೇಜುಗಳ ಸಂಖ್ಯೆ 155ಕ್ಕೆ ಇಳಿಕೆಯಾಗಿದೆ ಎಂದು ಕುಲಪತಿ ತಿಳಿಸಿದರು.