Advertisement

ನಾಗಮಂಡಲದಿಂದ ನಾಡಿಗೆ ಮಂಗಳ: ಒಡಿಯೂರು ಶ್ರೀ

12:43 PM Feb 22, 2017 | Team Udayavani |

ಹಕ್ಲಾಡಿ: ಚತುಃಪವಿತ್ರ ನಾಗಮಂಡಲ 
ಕುಂದಾಪುರ: ಧರ್ಮ ಹಾಗೂ ಸಂಸ್ಕೃತಿ ಬೇರೆ ಬೇರೆಯಾಗಿ ಕಂಡುಬಂದರೂ ಧರ್ಮವನ್ನು ಬಿಟ್ಟು ಸಂಸ್ಕೃತಿ ಇಲ್ಲ; ಸಂಸ್ಕೃತಿಯನ್ನು ಬಿಟ್ಟು ಧರ್ಮ ಇಲ್ಲ. ಭಗವಂತನೇ ಅದರ ಧರ್ಮದ ಸ್ಥಾಪಕ. ನಾಗದೇವರು ಸಂಪತ್ತು ಕೊಡುವ ದೇವರಾಗಿದ್ದು, ಕಣ್ಣಿಗೆ ಕಾಣುವ ದೇವರಾಗಿದೆ. ನಾಗ ಮಂಡಲದಿಂದ ನಾಡಿಗೆ ಮಂಗಳ ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ‌ ಶ್ರೀ ಗುರುದೇವಾ ನಂದ ಸ್ವಾಮೀಜಿ ನುಡಿದರು.

Advertisement

ಅವರು ಸೋಮವಾರ ಹಕ್ಲಾಡಿ ಬಾಳೆಮನೆ ಕುಟುಂಬಸ್ಥರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬದುಕಿಗೊಂದು ಸಂವಿಧಾನ ಬೇಕು. ಆ ಸಂವಿಧಾನವೇ ಧರ್ಮ. ಅದನ್ನು ಬದುಕಿನಲ್ಲಿ ಅಳಡಿಸಿಕೊಂಡು ಹೋದಲ್ಲಿ ಬದುಕು ಪರಿಪೂರ್ಣವಾಗುತ್ತದೆ. ನಡೆ ಮತ್ತು ನುಡಿ ಎಂಬ ಎರಡು ಅಂಶಗಳು ಜೋಡಿಸಿಕೊಂಡು ಹೋದಾಗ ಬದುಕು 
ಸಾರ್ಥಕ್ಯವನ್ನು ಪಡೆಯುತ್ತದೆ ಎಂದರು ಬಸೂÅರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹೈದರಾಬಾದಿನ ಹೊಟೇಲ್‌ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಹಿರಿಯರಾದ ಕಾಸರಗೋಡಿನ ಬಾಬು ರೈ, ನರಸಿಂಹ ಶೆಟ್ಟಿ ಬಾಳೆಮನೆ, ಜಿ.ಪಂ. ಮಾಜಿ ಸದಸ್ಯ ಹಕ್ಲಾಡಿ ಬಾಳೆಮನೆ ಸಂತೋಷ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ನ್ಯಾಯವಾದಿ ಟಿ.ಬಿ. ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪತ್ರಕರ್ತ ಕೆ.ಸಿ. ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿಶೋರ್‌ ಶೆಟ್ಟಿ ವಂದಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಾಗದೇವರ ಸಂದರ್ಶನ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಹಾಲಿಟ್ಟು ಸೇವೆ, ರಾತಿ ಚತುಃಪವಿತ್ರ ನಾಗಮಂಡಲ ಸೇವೆ, ಡಮರು ಸೇವೆ, ನರ್ತನ ಸೇವೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next