Advertisement
ಲೋಕಸಭೆಯಲ್ಲಿ ಈ ವಿಚಾರದ ಕುರಿತು ಹೇಳಿಕೆ ನೀಡಿದ ಶಾ, “ತಪ್ಪಾಗಿ ನಡೆದ ಕೃತ್ಯದಿಂದಾಗಿ ಅಸುನೀಗಿದ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಈ ದುರದೃಷ್ಟಕರ ಘಟನೆಗೆ ಕೇಂದ್ರ ಸರಕಾರವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಉಗ್ರರ ಚಲನವಲನಗಳ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಮಾಂಡೋಗಳು ಸ್ಥಳಕ್ಕೆ ಧಾವಿಸಿದ್ದರು. ಕಾರ್ಮಿಕರಿದ್ದ ಪಿಕಪ್ ವಾಹನವನ್ನು ನಿಲ್ಲುವಂತೆ ಸೂಚಿಸಿದರೂ, ವಾಹನ ವೇಗವಾಗಿ ಮುಂದಕ್ಕೆ ಚಲಿಸಿತು. ಹೀಗಾಗಿ ಒಳಗೆ ಬಂಡುಕೋರರು ಇದ್ದಾರೆಂದು ಭಾವಿಸಿ ಯೋಧರು ಗುಂಡಿನ ದಾಳಿ ಮಾಡಿದರು’ ಎಂದು ವಿವರಿಸಿದರು.
Related Articles
Advertisement
ಎಎಫ್ಎಸ್‌ಪಿಎ ರದ್ದು ಆಗ್ರಹ: ಘಟನೆ ಬೆನ್ನಲ್ಲೇ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಮಾಡಬೇಕೆಂಬ ಕೂಗು ಬಲವಾಗತೊಡಗಿದೆ. ಬಂಡು ಕೋರರನ್ನು ನಿಯಂತ್ರಿಸಲು ಜಾರಿ ಮಾಡಲಾಗಿದ್ದ ಕಾಯ್ದೆ ಅಗತ್ಯ ಈಗಿಲ್ಲ ಎಂದು ಎಂದು ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೋ ಹೇಳಿದ್ದಾರೆ. ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರೂ ಇಂಥ ಆಗ್ರಹ ಮಾಡಿದ್ದಾರೆ.