Advertisement

ಮೈಸೂರು ಸ್ವಚ್ಛ ಸುಂದರ ನಗರಿ

06:05 PM May 17, 2018 | Team Udayavani |

ನವದೆಹಲಿ: ದೇಶದಲ್ಲಿ ಅತ್ಯಂತ ಸ್ವಚ್ಛ ನಗರಗಳ ಬಗ್ಗೆ ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯ ಫ‌ಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಮಂಗಳೂರು ಮತ್ತು ಮೈಸೂರಿಗೆ ಮಾನ್ಯತೆ ಲಭಿಸಿದೆ. ಘನತ್ಯಾಜ ನಿರ್ವಹಣೆಯಲ್ಲಿ ಮಂಗಳೂರು “ಅತ್ಯುತ್ತಮ ನಗರ’ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದೆ. 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಕಡಲ ತಟದ ನಗರಕ್ಕೆ ಈ ಹೆಗ್ಗಳಿಕೆ ಪಾತ್ರವಾಗಿದೆ.

Advertisement

“ಸ್ವಚ್ಛ ಸರ್ವೇಕ್ಷಣ್‌ 2018′ ಶಿರೋನಾಮೆ ಅಡಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಇನ್ನು ಅರಮನೆಗಳ ನಗರ ಮೈಸೂರು 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ದೇಶ ದ ಲ್ಲಿಯೇ “ಅತ್ಯಂತ ಸ್ವಚ್ಛ ನಗರ’ ಎಂದು ಘೋಷಿಸಲಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವ ಹದೀìಪ್‌ ಸಿಂಗ್‌ ಪುರಿ ಬುಧವಾರ ಈ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ದೇಶದ ಅತ್ಯಂತ ಸ್ವತ್ಛ ನಗರ ಎಂಬ ಹೆಗ್ಗಳಿಕೆ ಸಿಕ್ಕಿದ್ದು ಮಧ್ಯಪ್ರದೇಶದ ಇಂದೋರ್‌ಗೆ. ಭೋಪಾಲ್‌ ಮತ್ತು ಚಂಡೀಗಡ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ. ರಾಜ್ಯಗಳ ಪೈಕಿ ಜಾರ್ಖಂಡ್‌ ಅತ್ಯಂತ ಉತ್ತಮ ಸಾಧನೆ ಮಾಡಿದ ರಾಜ್ಯ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದೆ. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ. ನವದೆಹಲಿ ಮುನಿಸಿಪಲ್‌ ಕಾರ್ಪೊರೇಷನ್‌ (ಎನ್‌ ಡಿಎಂಸಿ)ಗೆ “ಕ್ಲೀನೆಸ್ಟ್‌ ಸ್ಮಾಲ್‌ ಸಿಟಿ’ ಎಂಬ ಗರಿಮೆ ಸಿಕ್ಕಿದೆ. ಇದರ ಜತೆಗೆ ಉತ್ತರ ಭಾಗದಲ್ಲಿ ಘನ ತ್ಯಾಜ್ಯ 
ನಿರ್ವಹಣೆಯಲ್ಲಿ ಉತ್ತಮ ಸ್ಥಾನ ಪಡೆದಿದೆ. 

ಸಮೀಕ್ಷೆ ಪ್ರಧಾನ ಅಂಶಗಳು
*ಅತ್ಯಂತ ಶುಚಿಯಾಗಿರುವ ರಾಜಧಾನಿ- ಮುಂಬೈ
*ಅತ್ಯಂತ ಹೊಸತನ ಮತ್ತು ವಿನೂತನ ಅಭ್ಯಾಸಗಳ ಜಾರಿ- ನಾಗ್ಪುರ
*ವಲಯವಾರುಗಳ ಪೈಕಿ ಅತ್ಯಂತ ಶುಚಿತ್ವದ ನಗರ- ಪಂಜಾಬ್‌ನ ಭಾಲ್ಸೊ

Advertisement

Udayavani is now on Telegram. Click here to join our channel and stay updated with the latest news.

Next