Advertisement
ಎಂ.ಸ್ಯಾಂಡ್ ಕಾರ್ಖಾನೆ ಮುಚ್ಚಿಸಿ ಗ್ರಾಮಸ್ಥರ ಆರೋಗ್ಯ ರಕ್ಷಿಸಿ ಎನ್ನುತ್ತ ಈ ದೂಳಿನ ವಿರುದ್ಧ ಸಿಡಿದೆದ್ದ ಮುದ್ದಳ್ಳಿ ಗ್ರಾಮಸ್ಥರು ರೈತ ಸಂಘಟನೆ ನೆರವಿನೊಂದಿಗೆ ಗುರುವಾರ ಎಂ.ಸ್ಯಾಂಡ್ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದ ಪಕ್ಕವೇ ಎಂ.ಸ್ಯಾಂಡ್ ಘಟಕಕ್ಕೆ ಅನುಮತಿ ನೀಡಿದೆ. ಪರಿಸರ ರಕ್ಷಣೆ, ಗಣಿ ಸೇರಿ ಎಲ್ಲಾ ಕಾನೂನು ಉಲ್ಲಂಘಿಸಿ ಈ ಘಟಕಕ್ಕೆ ಅನುಮತಿ ನೀಡಿದೆ ಎಂದು ಪ್ರತಿಭಟನಾಕಾರರು
ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ ಅವರಿಗೆ ಮನವಿ ನೀಡಿ ಸೋಮವಾರದೊಳಗೆ ಘಟಕ ಮುಚ್ಚಿಸಿ, ಇಲ್ಲವಾದರೇ ನಾವೇ ಈ ಘಟಕಕ್ಕೆ ಬೀಗ ಜಡಿಯಬೇಕಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
Related Articles
Advertisement
ನೀವು ಜವಾಬ್ದಾರರಾ?: ಈ ವೇಳೆ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, ಅಲ್ಲಿಯವರಿಗೆ ಈ ದೂಳು ತಿಂದ ಗ್ರಾಮದ ಜನ, ಜಾನುವಾರುಗಳ ಆರೋಗ್ಯ ಹದಗಟ್ಟರೆ ಯಾರು ಜವಾಬ್ದಾರಿ, ನೀವಾ ಅಥವಾ ಅನುಮತಿ ನೀಡಿದ ಇಲಾಖೆಯಾ, ಅಧಿಕಾರಿಗಳಾ ಎಂದು ತೀಕ್ಷ್ಣ ವಾಗಿ ಪ್ರಶ್ನಿಸಿದರು.
ನಂತರ ಸೋಮವಾರದವರೆಗೆ ಕಾಲಾವಕಾಶ ನೀಡುತ್ತೇವೆ, ಸೋಮವಾರ ನೀವೇ ಈ ಘಟಕವನ್ನು ಸ್ಥಗಿತಗೊಳಿಸಿ, ಇಲ್ಲವಾದರೆ ನಾವೇ ಬಂಧು ಇದರ ಬಾಗಿಲಿಗೆ ಬೀಗ ಜಡಿಯುತ್ತೇವೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಶಿವಣ್ಣ, ಜಯಲಕ್ಷ್ಮೀ, ಶಿವಮ್ಮ, ಪ್ರಕಾಶ, ಮುದ್ದಯ್ಯ, ಸಿದ್ಧರಾಜು, ಕುಮಾರ ಶಿವಕುಮಾರ್, ಪರಶಿವ, ಚಿಕ್ಕಗಂಡಯ್ಯ, ಸುರೇಶ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮಕ್ಕೆ ತಾಗಿದಂತೆ ದೂಳಿನ ಘಟಕ ಆರಂಭಿಸಿರುವುದು ಸರಿಯೇ, ಈಗ ಗ್ರಾಮದ ಪರಿಸರವೆಲ್ಲ ದೂಳಿನಿಂದ ಆವೃತ್ತವಾಗುತ್ತಿದೆ. ಇದಕ್ಕೆ ಕಾರಣರು ಯಾರು?.
●ಜಯಲಕ್ಷ್ಮೀ, ಎಂ.ಸ್ಯಾಂಡ್
ಕಾರ್ಖಾನೆ ಪಕ್ಕದ ಜಮೀನಿನ ಮಾಲಿಕರು ಎಂ.ಸ್ಯಾಂಡ್ ದೂಳಿನಿಂದ ಜನ, ಜಾನುವಾರು ಸತ್ತರೆ ಶವವನ್ನು ರಸ್ತೆಯ ಮೇಲಿಟ್ಟು ಪ್ರತಿಭಟಿಸಬೇಕಾಗುತ್ತದೆ. ಈ ಕುರಿತು
ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
●ವಿದ್ಯಾಸಾಗರ್, ರೈತ ಸಂಘಟನೆ ಜಿಲ್ಲಾಧ್ಯಕ್ಷ ಎರಡು ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆದು ನಿಂತಿದ್ದು ಅದರ ಮೇಲೆ ಈಗ ದೂಳು ಸಂಗ್ರಹವಾಗುತ್ತಿದೆ. ರೈತರಿಗೆ ಆಗುವ ಸಮಸ್ಯೆಯನ್ನು ನಿವಾರಿಸಿ.
● ಸವಿತಾ ಮಹೇಶ, ಗ್ರಾಮಸ್ಥರು