ಮೈಸೂರು: ಜಿಲ್ಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿಒಟ್ಟು 27 ಲಕ್ಷ ಸಸಿ ನೆಡಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದರು. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಶೃಂಗೇರಿ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿಗಳ ಉದ್ಯಾನ ದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು, ರೈತರಿಗೆ ಸಸಿ ವಿತರಿಸಿ ಮಾತನಾಡಿ, ಸರ್ಕಾರಿ ಕಚೇ ರಿಗಳ ಆವರಣ ದಲ್ಲಿ ಅರಣ್ಯೀಕರಣ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.
ಪೋಷಣೆಯೂ ಮುಖ್ಯ: ವಿವಿಧ ಯೋಜ ನೆಗಳಡಿ ಜಿಲ್ಲಾದ್ಯಂತ ಈ ಸಾಲಿನಲ್ಲಿ 27 ಲಕ್ಷ ಗಿಡ ನೆಡಲು ಯೋಜನೆ ರೂಪಿಸಲಾಗಿದೆ. ಕೇವಲ ಲೆಕ್ಕಾಚಾರಕ್ಕೆ ಮಾತ್ರ ಸಸಿನೆಡದೆ, ನೆಟ್ಟ ಬಳಿಕವೂ ಪೋಷಣೆ ಮಾಡಲು ಕ್ರಮ ಕೈಗೊಳ್ಳಲಾಗು ವುದು. ನಾನೇ ಸಸಿ ನೆಟ್ಟ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸುತ್ತೇನೆ. ಚಾಮುಂಡಿ ಬೆಟ್ಟದಲ್ಲಿ ಒಂದು ಲಕ್ಷ ಗಿಡ ನೆಡುವ ಯೋಜನೆ ರೂಪಿಸಿದ್ದು, ಬೆಟ್ಟದ ಸುತ್ತಲ ಒತ್ತುವರಿ ಬಿಡಿಸಿ ಬೇಲಿ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪರಿಸರ ರಕ್ಷಿಸಿ: ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೊರೊನಾ ವೈರಸ್ ಪರಿಸರ ಅಸಮತೋಲನದಿಂದ ಉಂಟಾಗುವ ಪರಿಣಾಮವನ್ನು ಮನುಷ್ಯನಿಗೆ ತೋರಿಸಿಕೊಟ್ಟಿದೆ. ಹೀಗಾಗಿ ನಾವು ಈಗಲಾದರೂ ಬುದ್ಧಿ ಕಲಿಯಬೇಕು. ಕೆರೆ, ನದಿ, ವನ್ಯಜೀವಿ ಸಂರಕ್ಷ ಣೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾತನಾಡಿ, ಜಿಲ್ಲೆ ಯಲ್ಲಿ ಅರಣ್ಯೀಕರಣಕ್ಕೆೆ ಸಿದತೆ ಮಾಡಿಕೊಳ್ಳಲಾಗಿದೆ. ಅರಣ್ಯ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರ ಕ್ಷಣಾಧಿಕಾರಿ ಹಿರೇಲಾಲ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ರಿಶ್ಯಂತ್ ಇನ್ನಿತರರಿದ್ದರು.
1,025 ಹೆಕ್ಟೇರ್ ನೆಡುತೋಪು: ಮೈಸೂರು ವಿಭಾಗ ಡಿಸಿಎಫ್ ಪ್ರಶಾಂತ್‌ಕುಮಾರ್ ಮಾತನಾಡಿ, ಸಚಿವರ ಸೂಚನೆಯಂತೆ ಸರ್ಕಾರಿ ಕಚೇರಿ ಗಳಲ್ಲಿ ಅರಣ್ಯೀಕರಣ ಮಾಡಲಾಗುವುದು. “ಟೈಮ್ ಫಾರ್ ನೇಚರ್’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಾರಿ ಪರಿ ಸರ ದಿನಾಚರಣೆ ನಡೆಯಲಿದೆ. ಈ ಸಾಲಿನಲ್ಲಿ ಮೈಸೂರು, ಹುಣಸೂರು ವಿಭಾಗ, ಸಾಮಾಜಿಕ ಅರಣ್ಯ ವಿಭಾಗಗ ಳಿಂದ ಒಟ್ಟು 27 ಲಕ್ಷ ಸಸಿ ರಿಯಾಯಿತಿಯಲ್ಲಿ ಮಾರಾಟ ಮಾಡಲು ಬೆಳೆಸಲಾಗಿದೆ. ಅಲ್ಲದೆ 1,025 ಹೆಕ್ಟೇರ್ ನೆಡು ತೋಪು ನಿರ್ಮಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.