ಹುಣಸೂರು: ಕಾರೊಂದು ಮದ್ಯರಾತ್ರಿಯಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಿ.ಆರ್.ಪಿ.ಎಫ್.ಯೋಧನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿ ಬಳಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿಯ ನಾಗರಾಜಶೆಟ್ಟರ ಪುತ್ರ ಅಣ್ಣಯ್ಯ ಶೆಟ್ಟಿ (35) ಮೃತ ಸಿ.ಆರ್.ಪಿ.ಎಫ್.ಯೋಧ, ಪತ್ನಿ, ಇಬ್ಬರು ಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ.
ಇದನ್ನೂ ಓದಿ : ಸಿಂಧೂರಿ v/s ಶಿಲ್ಪಾನಾಗ್ : ಇನ್ನೂ ಮುಗಿದಿಲ್ಲ ಐಎಎಸ್ ಅಧಿಕಾರಿ ಸಮರ..!
ಪ್ರಸ್ತುತ ಮಹರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್ ನಲ್ಲಿ 14ವರ್ಷಗಳಿಂದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಎರಡು ದಿನಗಳ ಹಿಂದಷ್ಟೆ ರಜೆ ಮೇಲೆ ಊರಿಗೆ ಬಂದಿದ್ದರು. ಗುರುವಾರ ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ರಾತ್ರಿ ಊರಿಗೆ ತೆರಳುತ್ತಿದ್ದ ವೇಳೆ ತಾಲೂಕಿನ ಕಲ್ಲಹಳ್ಳಿ ಗೇಟ್ ನ ಹತ್ತಿರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು(ಶುಕ್ರವಾರ) ಮುಂಜಾನೆ ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನಿಂದ ಶವವನ್ನು ಹೊರ ತೆಗೆದು ಪರಿಶೀಲಿಸಿದ್ದಾರೆ.
ನೋವು-ಆಕ್ರಂದನ : ಹುಣಸೂರಿನ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಕುಟುಂಬದವರ ಗೋಳು ಹೇಳತೀರದಾಗಿತ್ತು. ಸ್ವಗ್ರಾಮ ಗೊರಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಇಡೀ ಗ್ರಾಮಸ್ಥರು ಕಂಬನಿ ಮಿಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಇದನ್ನೂ ಓದಿ : ಕೊರೊನಾ ತಡೆಗಟ್ಟು ವಲ್ಲಿ ಸರ್ಕಾರ ವಿಫಲ