Advertisement

ನಾಳೆ ಜಂಬೂ ಸವಾರಿ: ಮುಖ್ಯಮಂತ್ರಿ ಚಾಲನೆ, ಅರಮನೆ ಆವರಣಕ್ಕಷ್ಟೇ ಸೀಮಿತ

12:00 AM Oct 25, 2020 | sudhir |

ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಅರಮನೆ ನಗರಿ ಸಿದ್ಧವಾಗಿದೆ. ನಾಳೆ ಅರಮನೆ ಮೈದಾನದ ಆವರಣದೊಳಗೇ ಮೆರವಣಿಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳ ಮತ್ತು ಚುಟುಕಾಗಿ ಕಾರ್ಯಕ್ರಮ ನಡೆಯಲಿದೆ.

Advertisement

ಮೈಸೂರು : ಜಗದ್ವಿಖ್ಯಾತ ದಸರಾ ಜಂಬೂ ಸವಾರಿಗೆ ಸೋಮವಾರ ಅಪರಾಹ್ನ 2.59ರಿಂದ 3.20ರ ಮಕರ ಲಗ್ನದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಿದ್ದಾರೆ.

ಚಾಮುಂಡಿ ದೇವಿಗೆ ಪುಷ್ಪಾರ್ಚನೆ
ಅಪರಾಹ್ನ 3.40ರಿಂದ 4.30ರ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳಿಂದ ಪುಷ್ಪಾರ್ಚನೆ ನಡೆಯಲಿದೆ. ಈ ವೇಳೆ ಮುಖ್ಯಮಂತ್ರಿ ಸಹಿತ ಕೇವಲ ಆರು ಮಂದಿಗೆ ಮಾತ್ರ ಅವಕಾಶ.

“ಅಭಿಮನ್ಯು’ ನೇತೃತ್ವ
ಈ ಬಾರಿಯ ಅಂಬಾರಿ ಹೊರಲಿರುವವನು ಅಭಿಮನ್ಯು. ಇದೇ ಮೊದಲ ಬಾರಿಗೆ ಅವಕಾಶ. ಈತನಿಗೆ ಕಾವೇರಿ ಹಾಗೂ ವಿಜಯ ಸಾಥ್‌. ಪಟ್ಟದ ಆನೆ ಗೋಪಿ, ನಿಶಾನೆ ಆನೆ ವಿಕ್ರಮ ಹಿಂದೆ ಸಾಗಲಿವೆ.

ಎಲ್ಲವೂ ಆನ್‌ಲೈನ್‌
ಕೊರೊನಾದಿಂದಾಗಿ ಈ ಬಾರಿ ಮನೆಯಿಂದಲೇ ಜಂಬೂ ಸವಾರಿ ವೀಕ್ಷಿಸಬಹುದು. ದೂರದರ್ಶನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್‌ಬುಕ್‌ ಲಿಂಕ್‌ https://www.facebook.com/mysorevarthe/ ಹಾಗೂ ಯೂಟ್ಯೂಬ್‌ ಲಿಂಕ್‌ https://www.youtube.com/playlist?list=PLvhg&sbsHV‰ybFvK6Iu7HLoaOmh3yCcVC ನಲ್ಲಿ ನೇರಪ್ರಸಾರವಿದೆ.

Advertisement

300 ಮೀ.
ಈ ಬಾರಿಯ ಜಂಬೂ ಸವಾರಿ ಸಾಗಲಿರುವ ದಾರಿ.

2 ಸ್ತಬ್ಧಚಿತ್ರ ಮೆರವಣಿಗೆ

ಮೆರವಣಿಗೆಯಲ್ಲಿ ಅಶ್ವಾರೋಹಿ ದಳ, ಪೊಲೀಸ್‌ ಬ್ಯಾಂಡ್‌, ಆಯ್ದ ಕಲಾವಿದರು ಭಾಗಿ. ಕೇವಲ 2 ಸ್ತಬ್ಧಚಿತ್ರಗಳಿಗೆ ಅವ ಕಾ ಶ.

300 ಮಂದಿಗೆ ಆಹ್ವಾನ
ಸೋಮವಾರದ ಜಂಬೂ ಸವಾರಿಗಾಗಿ 300 ಮಂದಿ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸ್ವಾಗತ ಮತ್ತು ಆಮಂತ್ರಣ ಸಮಿತಿ ವತಿಯಿಂದ ಜಿಲ್ಲಾಡಳಿತ ಹೆಸರಿಸಿರುವ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಆದರೆ, ಹೆಚ್ಚಿನವರು ಪಾಲ್ಗೊಳ್ಳುತ್ತಿಲ್ಲ.

40 ನಿಮಿಷ ‌
ಈ ಬಾರಿ ಬನ್ನಿ ಮಂಟಪದಲ್ಲಿನ ಪಂಜಿನ ಕವಾಯತು ಇಲ್ಲ. ಅರಮನೆ ಆವರಣದಲ್ಲೇ ಅಂಬಾರಿ ಸಾಗುವುದರಿಂದ ಎಲ್ಲವೂ 40 ನಿಮಿಷದಲ್ಲಿ ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next