ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ವೃದ್ಧಯೊಬ್ಬರು ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 64 ವರ್ಷದ ವೃದ್ಧರೊಬ್ಬರು ಭಾನುವಾರ ಮೃತರಾಗಿ ದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೋಂಕು ದೃಢಪಟ್ಟಿದ್ದ ಹಿನ್ನೆಲೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ 70, 82 ವರ್ಷದ ವೃದ್ಧರು ಹಾಗೂ 36 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಇನ್ನು ನಾಲ್ಕು ದಿನಗಳ ಹಿಂದೆಯೂ 60 ವರ್ಷದ ವೃದ್ಧೆ ಮೃತಪಟ್ಟಿದ್ದರು.
25 ಮಂದಿಗೆ ಸೋಂಕು ದೃಢ: ಜಿಲ್ಲೆಯಲ್ಲಿ ಭಾನುವಾರ ಗರ್ಭಿಣಿ ಸೇರಿದಂತೆ 25 ಜನರಿಗೆ ಸೋಂಕು ದೃಢಪಡುವು ದರೊಂದಿಗೆ ಸೋಂಕಿತರ ಸಂಖ್ಯೆ 436 ಕ್ಕೇರಿದೆ. 16565 ನಂ. ಸೋಂಕಿತ ಸಂಪರ್ಕ ಹೊಂದಿದ್ದ 40, 33 ವರ್ಷದ ಮಹಿಳೆ, 24, 21 ಯುವತಿ, 7 ವರ್ಷದ ಬಾಲಕ ಹಾಗೂ 21 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ.
16560 ನಂ.ಸೋಂಕಿತ ಸಂಪರ್ಕ ಹೊಂದಿದ್ದ 34 ಹಾಗೂ 40 ವರ್ಷದ ಪುರುಷರಿಗೆ, 10343 ನಂ.ಸೋಂಕಿತ ಸಂಪರ್ಕ ಹೊಂದಿದ್ದ 29 ವರ್ಷದ ಮಹಿಳೆ, 10345 ನಂ.ಸೋಂಕಿತ ಸಂಪರ್ಕ ಹೊಂದಿದ್ದ 41 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಅಂತರ ಜಿಲ್ಲೆ ಪ್ರಯಾಣದ ಹಿನ್ನೆಲೆ ಹೊಂದಿರುವ 56, 38, 45, 59, 50 ವರ್ಷದ ಪುರುಷರಿಗೆ, ಆಂಧ್ರ ಪ್ರದೇಶದಿಂದ ಬಂದಿರುವ 27 ಯುವತಿಗೆ ಕೋವಿಡ್ 19 ದೃಢಪಟ್ಟಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ 40 ವರ್ಷದ ಪುರುಷ ಹಾಗೂ 64 ವರ್ಷದ ವೃದ್ಧನಿಗೆ, ಶೀತಜ್ವರ ಮಾದರಿ ಅನಾರೋಗ್ಯ (ಐಎಲ್‌ಐ) ಬಳಲುತ್ತಿರುವ 38 ವರ್ಷದ ಮಹಿಳೆ ಹಾಗೂ 55 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. 25 ವರ್ಷದ ಯುವತಿ, 22 ವರ್ಷದ ಯುವಕ ಹಾಗೂ 42, 47 ಪುರುಷರಲ್ಲಿ ಹೇಗೆ ಸೋಕು ಬಂತು ಎಂದು ಪತ್ತೆ ಮಾಡಲಾಗುತ್ತಿದೆ. ಇವರೆಲ್ಲರನ್ನು ಕೋವಿಡ್ 19 ಕಾಂಡ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
12 ಸೋಂಕಿತರು ಗುಣಮುಖ: ಜಿಲ್ಲೆಯಲ್ಲಿ ಭಾನುವಾರ 12 ರೋಗಿಗಳು ಕೋವಿಡ್-19 ರೋಗದಿಂದ ಗುಣವಾಗುವ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ 252 ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 179 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.