Advertisement

ಜನ ಸಂಪರ್ಕ ಸೇತು ಮೈ ಗವ್‌ ಕರ್ನಾಟಕ

12:33 AM Jan 17, 2021 | Team Udayavani |

ಬೆಂಗಳೂರು: ತಂತ್ರಜ್ಞಾನದ ಮೂಲಕ ಜನ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿರುವ ರಾಜ್ಯ ಸರಕಾರ, ಇದಕ್ಕಾಗಿ ಮೋದಿ ಸರಕಾರದ ಹೆಜ್ಜೆ ಯನ್ನು ಅನುಸರಿಸಲು ಮುಂದಾಗಿದೆ.

Advertisement

ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಜನ ಸಕ್ರಿಯವಾಗಿ ಭಾಗ ವಹಿಸುವುದನ್ನು ಉತ್ತೇಜಿಸುವ ಸಂಪರ್ಕ ಸೇತುವಾಗಿ ನಾಗರಿಕ ಸಹಭಾಗಿತ್ವದ ಡಿಜಿಟಲ್‌ ವೇದಿಕೆ ಸದ್ಯದಲ್ಲೇ ಅನಾವರಣವಾಗಲಿದೆ. ಕೇಂದ್ರದ ಮಹತ್ವಾಕಾಂಕ್ಷಿ “ಮೈ ಗವ್‌’ ಮಾದರಿಯಲ್ಲಿ “ಮೈ ಗವ್‌ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಕೇಂದ್ರದ ಮೈಗವ್‌ (MyGov.in) ಜಾಲತಾಣದ ರಾಜ್ಯ ಅವತರಣಿಕೆ ಇಂಗ್ಲಿಷ್‌ ಭಾಷೆಯಲ್ಲಿ ಈಗಾಗಲೇ ಸಿದ್ಧವಾಗಿದೆ. ಕನ್ನಡದಲ್ಲೂ ಇದು ಸಕ್ರಿಯವಾಗಲಿದ್ದು, ಈಗಾಗಲೇ ಭಾಷಾಂತರ ಪ್ರಕ್ರಿಯೆ ನಡೆದಿದೆ ಎಂದು ಇ-ಆಡಳಿತ ಇಲಾಖೆ ಮೂಲಗಳು ತಿಳಿಸಿವೆ.

ಇಲಾಖಾ ಮಟ್ಟದ ಮಾಹಿತಿ ಕುರಿತಂತೆ ವಿವಿಧ ಸ್ಪರ್ಧೆಗಳನ್ನು ನಡೆಸುವುದು, ಆ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶವನ್ನೂ ಹೊಂದಲಾಗಿದೆ.

  • ಮೈಗವ್‌ ಸಾಮಾಜಿಕ ಜಾಲ ತಾಣಗಳನ್ನು ಸಿಎಂ ಅವರ ಅಧಿಕೃತ ಸಾಮಾಜಿಕ ಜಾಲತಾಣ ನಿರ್ವಾಹಕರು ನಿರ್ವಹಿಸಲಿದ್ದಾರೆ.
  • 22014ರಲ್ಲಿ ಕೇಂದ್ರ ಆರಂಭಿ ಸಿದ “ಮೈಗವ್‌’ ಜಾಲತಾಣ ವೇದಿಕೆ ಜತೆ ರಾಜ್ಯ ಜಾಲತಾಣವೂ ಸಂಯೋಜನೆ ಹೊಂದಲಿದೆ.
  • ಈ ಯೋಜನೆ ಸಂಬಂಧ ವಿವಿಧ ಹಂತದಲ್ಲಿ ಬೇಕಾದ ಸಿಬಂದಿಯ ನೇಮಕ ಸಂಬಂಧ ಇ- ಆಡಳಿತ ಇಲಾಖೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮೈಗವ್‌ ಅಳವಡಿಸಿರುವ ರಾಜ್ಯಗಳು :

Advertisement

ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಝಾರ್ಖಂಡ್‌, ಮಹಾರಾಷ್ಟ್ರ, ಛತ್ತೀಸ್‌ಘಡ, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್‌,  ಮಣಿಪುರ, ತ್ರಿಪುರ, ಗೋವಾ, ತಮಿಳುನಾಡು

ಈಗ ಏನು ಸಿದ್ಧ? :

ಮೈಗವ್‌ ವೇದಿಕೆ ದ್ವಿಭಾಷಾ ಪುಟ. ಇಂಗ್ಲಿಷ್‌ ಪುಟ ಈಗಾಗಲೇ ಸಿದ್ಧವಿದ್ದು, ಪ್ರತ್ಯೇಕ ಸರ್ವರ್‌ ಹೊಂದಿರುತ್ತದೆ. ಸರಕಾರದ ಅನು ಮತಿಯ ಬಳಿಕ ಬೇಟಾ ವರ್ಷನ್‌ ಪ್ರಕಟವಾಗಲಿದೆ. ಕನ್ನಡ ಪುಟದ ಸಿದ್ಧತೆ ಭರದಿಂದ ಸಾಗಿದೆ.

ಉದ್ದೇಶಿತ ಜಾಲತಾಣ/ಸಾಮಾಜಿಕ ಜಾಲತಾಣ ನಿರ್ವಹಣೆ :

ಕರ್ನಾಟಕ ಅವತರಣಿಕೆ: www.karnataka.mygov.in  ಟ್ವಿಟರ್‌: @MyGovKarnataka   ಫೇಸ್‌ಬುಕ್‌: @MygovKarnataka  ಇನ್‌ಸ್ಟಾಗ್ರಾಮ್‌: @mygovkarnataka

 

  -ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next