Advertisement
ಅವರು ಉಡುಪಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಕುಡಿಯವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ಸಮಸ್ಯೆ ಉಡುಪಿ ನಗರದಲ್ಲಿ ಮತದಾರರು ಎತ್ತುತ್ತಿದ್ದ ಸಮಸ್ಯೆ ಆಗಿದ್ದು ಇವುಗಳಿಗೆ ಒಂದು ವೈಜ್ಞಾನಿಕ ಪರಿಹಾರವನ್ನೂ ಹುಡುಕಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರು ಮಾತನಾಡಿ, ಬಿಜೆಪಿಯ ಮುಖಂಡರುಗಳಾದ ಶೋಭಾ ಹಿಂದೆ ಗ್ಯಾಸ್ ಸಿಲಿಂಡರ್‌ಗೆ ಹತ್ತು ರೂ. ಜಾಸ್ತಿ ಮಾಡಿದಾಗಲೆಲ್ಲಾ ಬೀದಿಗಿಳಿದು ಸರಕಾರಕ್ಕೆ ಹಿಗ್ಗಾ ಮುಗ್ಗಾ ನಿಂದಿಸುತ್ತಿದ್ದರು, ಈಗ ಶೋಭಕ್ಕ ಕ್ಷೇತ್ರದಿಂದಲೇ ಕಣ್ಮರೆ ಆಗಿದ್ದಾರೆ, ಉಡುಪಿಯ ಎಲ್ಲಾ ಸರಕಾರಿ ಕಛೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಇನ್ನೊಮ್ಮೆ ಬಿಜೆಪಿ ಬಂದರೆ ದೇವರೇ ಬಂದರೂ ಪರಿಸ್ಥಿತಿ ಸರಿ ಪಡಿಸಲು ಸಾಧ್ಯವೇ ಇಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.
ಭಾವನಾತ್ಮಕ ವಿಚಾರಕ್ಕೆ ತಡೆ:
ಜಿಲ್ಲಾ ಕಾಂಗ್ರೆಸ್ ಮುಖಂಡ ಕುಶಲ್ ಶೆಟ್ಟಿ ಕಾಂಗ್ರೆಸ್ ಸರಕಾರಗಳ ಕೊಡುಗೆಯಿಂದ ಜನರ ಜೀವನ ಮಟ್ಟ ಸುಧಾರಣೆ ಆಗಿದೆ, ಆದರೂ ಜನರು ಭಾವನಾತ್ಮಕ ವಿಚಾರಗಳಿಗೆ ಬಲಿಯಾಗಿ ಕೆಲವೊಮ್ಮೆ ಬಿಜೆಪಿಯ ಕಡೆ ವಾಲುವುದು ದುರದೃಷ್ಟಕರ. ಇದನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ ಪ್ರಧಾನಿ ಮೋದಿಯವರು ದೇಶವನ್ನೇ ಮಾರಲಿದ್ದಾರೆ, ಈಗಾಗಲೇ ವಿಮಾನ ನಿಲ್ದಾಣ, ಸಾರ್ವಜನಿಕ ಬ್ಯಾಂಕ್ ಗಳಲ್ಲಿನ ಶೇರುಗಳು, ಎಲ್‌ಐಸಿ ಯ ಶೇರುಗಳು, ಸ್ಟೇಡಿಯಮ್‌ಗಳು, ಇನ್ನೂ ಅನೇಕ ಸರಕಾರಿ ಸಂಸ್ಥೆಗಳನ್ನು ತನ್ನ ಕೆಲವೇ ಕೆಲವು ಮಿತ್ರರಿಗೆ ಖಾಸಗೀಕರಣ ಮಾಡಿ ನೀಡಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಅಜ್ಞಾನದ ಪರಮಾವಧಿಕಾಂಗ್ರೆಸ್ ಸರಕಾರಗಳು ಕಟ್ಟಿದ ಆಸ್ಪತ್ರೆಯಲ್ಲಿ ಜನ್ಮ ತಾಳಿ ,ಕಾಂಗ್ರೆಸ್ ಸರಕಾರವೇ ನೀಡಿದ ನಿವೇಶನದಲ್ಲಿ ಕಟ್ಟಿದ ಮನೆಯಲ್ಲಿ ಬೆಳೆದು ಅದೇ ರೀತಿ ಕಾಂಗ್ರೆಸ್ ಅವಧಿಯಲ್ಲೇ ಆದ ಶಾಲೆ ಕಾಲೇಜುಗಳಲ್ಲಿ ಓದಿ, ಕಾಂಗ್ರೆಸ್ ಸರಕಾರಗಳು ನಿರ್ಮಾಣ ಮಾಡಿದ ರಸ್ತೆ ಸೇತುವೆಗಳಲ್ಲಿ ದಿನಾ ಸಂಚಾರ ಮಾಡುತ್ತಾ ಈಗಿನ ಪೀಳಿಗೆಯ ಕೆಲ ಯುವಕರು ಬಹಳ ತಾತ್ಸಾರವಾಗಿ ಕಾಂಗ್ರೆಸ್ ಅರವತ್ತು ವರ್ಷಗಳಲ್ಲಿ ಏನು ಮಾಡಿದೆ ಎಂದು ಕೇಳುವುದು ಅವರಲ್ಲಿದ್ದ ಅಜ್ಞಾನದ ಪರಮಾವಧಿ.
-ಅಮೃತ್ ಶೆಣೈ,
ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ