Advertisement

Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈಓವರ್‌ ಆಗಲಿ: ರಮೇಶ್‌ ಕಾಂಚನ್‌

12:48 AM Dec 12, 2024 | Team Udayavani |

 

Advertisement

ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾ ಕಾರದಿಂದ ಅನುಮೋದನೆ ನೀಡಿರುವುದನ್ನು ಪುನರ್‌ ಪರಿಶೀಲಿಸಿ ಇಲ್ಲಿಗೆ ಸೂಕ್ತವಾದ ಎಲಿವೇಟೆಡ್‌ ಫ್ಲೈ ಓವರ್‌ ನಿರ್ಮಿಸುವಂತೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರವನ್ನು ಆಗ್ರಹಿಸಿದ್ದಾರೆ.

ಉಡುಪಿ, ಕುಂದಾಪುರದಲ್ಲಿ ಈ ಹಿಂದೆ ನಿರ್ಮಿಸಲ್ಪಟ್ಟ ಅಂಡರ್‌ಪಾಸ್‌ನಿಂದ ಪ್ರಯಾಣಿಕರು, ಸಾರ್ವಜನಿಕರು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಅಂಡರ್‌ಪಾಸ್‌ ಸಂಪರ್ಕದ ಸರ್ವಿಸ್‌ ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.

ಸಂತೆಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‌ಪಾಸ್‌ ಕಾಮಗಾರಿಯೂ ಅವೈಜ್ಞಾನಿಕವಾಗಿರುವುದು ಪ್ರತ್ಯಕ್ಷ ಸಾಕ್ಷಿ. ಎಲಿವೇಟೆಡ್‌ ಫ್ಲೈ ಓವರ್‌ ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆಯಾಗಿದೆ.

ಅಂಡರ್‌ಪಾಸ್‌ ನಿರ್ಮಾಣದಿಂದ ಆಗುವ ತೊಂದರೆಗಳು ಮತ್ತು ಎಲಿವೇಟೆಡ್‌ ಫ್ಲೈ ಓವರ್‌ ನಿರ್ಮಾಣದಿಂದ ಆಗುವ ಅನುಕೂಲತೆಗಳ ಬಗ್ಗೆ ಸರಿಯಾಗಿ ವಿಮರ್ಶಿಸಿ ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈ ಓವರ್‌ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸುವಂತೆ ರಮೇಶ್‌ ಕಾಂಚನ್‌ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next