Advertisement
ಸಂಗೀತವು ಎಲ್ಲ ಮಾನವ ಭಾವನೆಗಳನ್ನು ಮೀರುವ ಒಂದು ವಿಷಯವಾಗಿದೆ. ವ್ಯಕ್ತಿಯ ಮನಸ್ಥಿತಿ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಸಂಗೀತದ ಚಿಕಿತ್ಸೆಯನ್ನು ಅನಾದಿ ಕಾಲದಿಂದಲೂ ರೋಗಿಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಜನರ ತಮ್ಮ ದೈನಂದಿನ ಜೀವನದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದು ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಇತರರೊಂದಿಗೆ ಉತ್ತಮ ಸಂವಹನ ನಡೆಸಲು ಸಹಾಯಕಾರಿಯಾಗಿದೆ. ಸಂಗೀತವು ಗಾಯಕರ ಒಂದು ಭಾಗವಾಗಿದೆ ಇದರಿಂದ ಅವರು ಸಂತೋಷವನ್ನು ಪಡುತ್ತಾರೆ. ಸಂಗೀತವನ್ನು ಕೇಳುವಾಗ ಕೆಲವೊಮ್ಮೆ ನಮ್ಮನ್ನು ನಾವೇ ಮರೆಯುತ್ತೇವೆ.
Related Articles
Advertisement
ಅಸ್ತಮಾ, ಮೆದುಳಿನ ಅಸ್ವಸ್ಥೆಗಳಂತಹ ಪರಿಸ್ಥಿತಿಯಲ್ಲಿ ವೈದ್ಯರು ಸಂಗೀತದ ಚಿಕಿತ್ಸೆಯನ್ನು ಬಳಸುತ್ತಾರೆ. ಸಂಗೀತದ ಮೂಲಕ ರೋಗಿಯ ಸಮಸ್ಯೆಯನ್ನು ತಿಳಿದುಕೊಂಡು ಗುಣಪಡಿಸಬಹುದಾಗಿದೆ. ಮಾನಸಿಕ ಖನ್ನತೆಗೆ ಒಳಗಾದವರಿಗೆ ಖನ್ನತೆಯಿಂದ ಹೊರಬರಲು ಸಂಗೀತವು ಸಹಾಯ ಮಾಡುತ್ತದೆ.
ಸಂಗೀತ ದೇಹದ ಇಂದ್ರಿಯವನ್ನು ಉತ್ತೇಜಿಸುತ್ತದೆ ಇದು ನಮ್ಮ ಉಸಿರಾಟ, ಹೃದಯಬಡಿತ, ದೈಹಿಕ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ. ಪಿಎಸ್‌ಟಿಡಿ, ಆಘಾತ, ಅನೇಕ ಮಾನಸಿಕ ರೋಗಗಳಿಗೆ ಸಂಗೀತ ಚಿಕಿತ್ಸೆಯು ಪ್ರಯೋಜನ ಕಾರಿಯಾಗಿದೆ ಎಂದು ಸಂಶೋಧನೆ ಹೇಳುತ್ತದೆ.
-ಪಲ್ಲವಿ ಹೆಗಡೆ
ಬಪ್ಪನಳ್ಳಿ