ಬೆಂಗಳೂರು ; ರಾಜ್ಯ ರಾಜಕೀಯದಲ್ಲಿ ನಾನೆಂದೂ ಲಾಬಿ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿಲ್ಲ ಹಾಹಾಗಿ ಯಾರಿಗೆ ಅವಕಾಶ ಕೊಟ್ಟರು ಸಂತೋಷದಿಂದ ಸ್ವೀಕಾರ ಮಾಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದು ತುಂಬಾ ನೋವಾಗಿದೆ. ಆದರೆ ಬಿಜೆಪಿಯಲ್ಲಿ ಇದು ಅನಿವಾರ್ಯ, 75ವರ್ಷದ ಬಳಿಕ ಯುವಕರಿಗೆ ಬಿಟ್ಟು ಕೊಡಬೇಕು ಎಂಬುದು ಬಿಜೆಪಿಯ ಸಿದ್ಧಾಂತ ಹಾಗಾಗಿ ಹೈಕಮಾಂಡ್ ಹೊಸ ನಾಯಕರನ್ನು ಆರಿಸುತ್ತದೆ, 120 ಶಾಸಕರು ಸಿಎಂ ಆಗೋಕೆ ಅರ್ಹರು ಆಗಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ ಹೆಗ್ಗಳಿಕೆ ಯಡಿಯೂರಪ್ಪ ಅವರಿಗಿದೆ ಅವರು ಅವರಿಂದಾಗಿ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಬಿಜೆಪಿಯಲ್ಲಿ ಗೆದ್ದಿದ್ದಾರೆ.
ಇದನ್ನೂ ಓದಿ : ಯಡಿಯೂರಪ್ಪ ಅವರಿಗೆ ಈಗ ಮದುವೆ ಮಾಡಿದ್ರೂ ಎರಡು ಮಕ್ಕಳಾಗುತ್ತೆ: ಸಿ.ಎಂ.ಇಬ್ರಾಹಿಂ
ಉತ್ತರ ಕರ್ನಾಟಕದ ಮಂದಿಗೆ ಉಮೇಶ್ ಕಟ್ಟಿ ಸಿಎಂ ಆಗಬೇಕೆಂಬ ಬೇಡಿಕೆ ಇದೆ ಆದರೆ ಹೈಕಮಾಂಡ್ ಸಂಘ ಪರಿಹಾರದವರ ಪಕ್ಷದವರ ,ಸಂಘಟನೆ ಅವರಿಂದ ಮಾಹಿತಿ ಪಡೆಯುತ್ತಿದೆ. ಯಾರಿಗೆ ಅವಕಾಶ ಕೊಟ್ಟರು ಸಂತೋಷದಿಂದ ಸ್ವೀಕಾರ ಮಾಡ್ತೇವೆ ಎಂದರು.