Advertisement
ಘಟನೆ ಏನು : ಅಮೆರಿಕಾದ ಓಹಿಯೋದ ಕ್ರಿಸ್ಟಲ್ ಎ. ಕ್ಯಾಂಡೆಲಾರಿಯೊ ಎಂಬ ಮಹಿಳೆ ಹತ್ತು ದಿನಗಳ ತಿರುಗಾಟಕ್ಕೆ ಹೋಗಿದ್ದಾಳೆ, ಆದರೆ ತನ್ನ 16 ತಿಂಗಳ ಮಗು ಜೈಲಿನ್ ಅನ್ನು ಜೊತೆಗೆ ಕರೆದುಕೊಂಡು ಹೋಗುವ ಬದಲು ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಆದರೆ ಆ ಪುಟ್ಟ ಮಗುವಿಗೆ ತಾಯಿ ಎಲ್ಲಿಗೆ ಹೋಗಿದ್ದಾಳೆ ಎಂಬ ವಿಚಾರಣೆ ತಿಳಿದಿರುವುದಿಲ್ಲ ತನಗೆ ಹಸಿವಾದಾಗ ಕೂಗಿದರೆ ತಾಯಿ ಬಂದು ಹಾಲು ಕೊಡುತ್ತಾಳೆ ಎಂದಷ್ಟೇ ಆ ಸಮಯದಲ್ಲಿ ಮಗುವಿಗೆ ಗೊತ್ತು ಆದರೆ ಆ ಮಹಾತಾಯಿ ಪುಟ್ಟ ಮಗುವನ್ನು ಮನೆಯೊಳಗೆ ಬಿಟ್ಟು ಪ್ರವಾಸಕ್ಕೆ ತೆರಳಿದ್ದಾಳೆ ಹತ್ತು ದಿನ ಕಳೆದು ಮನೆಗೆ ಬಂದಾಗ ಮನೆಯೊಳಗೆ ನಿಶಬ್ದವಾಗಿತ್ತು ಮಗುವಿನ ಚಲನವಲನ ಕೇಳುತ್ತಿರಲಿಲ್ಲ ಮನೆಯೊಳಕೆ ಕಣ್ಣಾಡಿಸಿ ನೋಡಿದಾಗ ಮಗು ಮಲಗಿದ ರೀತಿಯಲ್ಲೇ ಕೊನೆಯುಸಿರೆಳೆದಿತ್ತು. ಗಾಬರಿಗೊಂಡ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಮಗು ಮೃತಪಟ್ಟಿರುವುದು ದೃಢಪಟ್ಟಿದೆ, ಆದರೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಮಗು ಡಿಹೈಡ್ರೇಷನ್ನಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮಗುವಿನ ವಿಚಾರ ತಾಯಿಯಲ್ಲಿ ಕೇಳಿದಾಗ ತಾಯಿ ತಾನು ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು ಹತ್ತು ದಿನಗಳ ಕಾಲ ತಿರುಗಾಡಲು ಹೋಗಿದ್ದೆ ಅಲ್ಲದೆ ಪಕ್ಕದ ಮನೆಯವರಲ್ಲಿ ಮಗುವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.
Related Articles
Advertisement