Advertisement
ನಿಯಮವೇನು..?: ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಸೆಕ್ಷನ್ 19(5) ರ ಅಡಿಯಲ್ಲಿ ರಾಜ್ಯ ಮಾ ಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧ ರಿಸಿ, ಕಸಕ್ಕೆ ಬೆಂಕಿ ಹಚ್ಚುವುದನ್ನು ರಾಜ್ಯ ಸರ್ಕಾರ ನಿರ್ಬಂಧಿ ಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ, ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡುವಂತ್ತಿಲ್ಲ. ಸರ್ಕಾರದ ಅದೇಶ ಉಲ್ಲಂ ಸಿ ಕಸಕ್ಕೆ ಬೆಂಕಿ ಹಚ್ಚಿದರೆ 5 ಲಕ್ಷ ರೂ.ವರೆಗೆ ದಂಡ ತೆರಬೇಕು. ಇಲ್ಲವೆ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿಕ್ಷೆ ವಿಧಿಸಬದಹುದಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಅರಿವಿಲ್ಲದೆ ಇರುವುದರಿಂದ ಅವರು ಇದನ್ನು ಜಾರಿಗೆ ತರುವ ಗೋಜಿಗೆ ಹೋಗುತ್ತಿಲ್ಲ.
Related Articles
Advertisement
ಮುಂಜಾನೆ ವೇಳೆ ಧಗಧಗಿಸುವ ಬೆಂಕಿ: ಪಟ್ಟಣದಲ್ಲಿ ಅನೇಕ ಬಾರ್ ಅಂಡ್ ರೆಸ್ಟೋರೆಂಟ್, ವೈನ್‌ಶಾಪ್ ನಲ್ಲಿ ಬೀಳುವ ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಲೋಟ ಸೇರಿದಂತೆ ಮಣ್ಣಿನಲ್ಲಿ ಕರಗದ ಕಸವನ್ನು ಆಯಾ ಅಂಗಡಿ ಮಾಲಿಕರೇ ಮುಂದೆ ನಿಂತು ತಮ್ಮ ಕೂಲಿ ಕಾರ್ಮಿಕರ ಮೂಲಕ ರಸ್ತೆ ಬದಿಗೆ ಸುರಿಸಿ ಬೆಂಕಿ ಹಾಕಿಸುತ್ತಾರೆ. ಇನ್ನು ಗ್ಯಾರೇಜ್ ಮಾಲಿಕರು, ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಹಾಕುವುದು ಮಾಮೂಲಾಗಿದೆ. ಅಂಗಡಿ ಮುಂಗಟ್ಟು, ಹೋಟೆಲ್‌ನಲ್ಲಿ ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಪುರಸಭೆ ವಾಹನಕ್ಕೆ ನೀಡಲು ಮುಂದಾಗುತ್ತಾರೆ. ಆದರೆ, ಪುರಸಭೆ ಆಟೋ ಟಿಪ್ಪರ್‌ಗಳು ನಿತ್ಯವೂ ಕಸ ಸಂಗ್ರಹಣೆಗೆ ತೆರಳದೆ ಇರುವುದರಿಂದ ಅನ್ಯ ಮಾರ್ಗವಿಲ್ಲದೆ ರಾತ್ರಿ ವೇಳೆ ಅಂಗಡಿ ಬಾಗಿಲು ಹಾಕುವ ಸಮಯದಲ್ಲಿ ಕಸವನ್ನು ತಮ್ಮ ಅಂಗಡಿ ಮುಂದೆ ಸುರಿದು ಬೆಂಕಿ ಹಾಕುತ್ತಾರೆ. ಕೆಲವರು ನಾಲೆ ಏರಿ ಮೇ ಲೆ ಸುರಿದು ಬೆಂಕಿ ಹಾಕುವುದರಿಂದ ವಾಯು ಮಾಲಿನ್ಯದಲ್ಲಿಯೇ ವಾಯು ವಿಹಾರ ಮಾಡುವ ಪರಿಸ್ಥಿತಿ ಉದ್ಬವಾಗಿದೆ.
ನೀರಾವರಿ ಅಧಿಕಾರಿ ಬೇಜವಾಬ್ದಾರಿ: ನೀರಾವರಿ ಇಲಾಖೆಯಲ್ಲಿ ಉದ್ಯಾನವನ ನೋಡಿಕೊಳ್ಳಲ್ಲು ಕಾವಲುಗಾರರನ್ನು ನೇಮಿಸಿ ಕೈ ತೊಳೆದುಕೊಂಡಿದ್ದಾರೆ, ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ವಿಚಾ ರಣೆ ಮಡುತ್ತಿಲ್ಲ. ಅಧಿಕಾರಿಗಳಿಗೆ ಸರ್ಕಾರ ವೇತನದ ಅನೇಕ ಬತ್ಯೆಗಳನ್ನು ನೀಡಿ ಜೊತೆ ವಾಹನ ವ್ಯವಸ್ಥೆ ಕಲ್ಪಿಸಿದೆ. ಆದರೂ, ಹೇಮಾವತಿ ನಾಲೆ ಮೇಲೆ ಆಗುತ್ತಿರುವ ವಾಯು ಮಾಲಿನ್ಯ ತಪ್ಪಿ ಸಲು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.
ನೇಪತ್ಯಕ್ಕೆ ಸರಿದ ಪ್ಲಾಸ್ಟಿಕ್ ರೈಡ್: ಪಟ್ಟಣದಲ್ಲಿ ರಾಜಾ ರೋಷವಾಗಿ ಪ್ಲಾಸ್ಟಿಕ್ ಮಾರಾಟ ಮಾಡಲಾಗುತ್ತಿದೆ, ಮೇಲಧಿಕಾರಿ ಒತ್ತಡ ಹಾಕಿದಾಗ ಪೋಟೋ ಶೂಟ್ ಗಾಗಿ ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ರೈಡ್ ಮಾಡಿ ಫೋಟೋ ತೆಗೆದು ಜಿಲ್ಲಾಡಳಿತಕ್ಕೆ ರವಾನೆ ಮಾಡಿದ್ದು ಬಿಟ್ಟಿರೆ ಪಟ್ಟಣವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಗೋಜಿಗೆ ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ.
ಹೇಮಾವತಿ ನಾಲೆ ಏರಿ ಮೇಲೆ ಸಂಗ್ರಹವಾಗಿದ್ದ ಕಸವನ್ನು ತೆರವು ಮಾಡಿ ಹಲವು ಭಾರಿ ಸ್ವಚ್ಛತೆ ಮಾಡಲಾಗಿದೆ. ನೀರಾವರಿ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಯಿಂದ ನಾಲೆ ಏರಿ ಮೇಲೆ ಪದೇ ಪದೇ ಕಸ ಸುರಿದು ಬೆಂಕಿ ಹಚ್ಚಲಾಗುತ್ತಿದೆ. -ಕೃಷ್ಣಮೂರ್ತಿ, ಪುರಸಭೆ ಅಧಿಕಾರಿ.
– ಶಾಮಸುಂದರ್ ಕೆ ಅಣ್ಣೇನಹಳ್ಳಿ