Advertisement
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರು ತಮ್ಮ ಪ್ರವಚನದಲ್ಲಿ ಕ್ರಿಸ್ತರ ಜನನದ ಬಗ್ಗೆ ವಿವರಿಸಿ, ಕ್ರಿಸ್ತರ ಜನನ ಜಗತ್ತಿಗೆ ಹೊಸ ಹುರುಪು ತಂದಿದೆ. ನೊಂದ ಜೀವಗಳಿಗೆ ಭರವಸೆ ತುಂಬಿದೆ. ದೇವರು ಜಗತ್ತಿನಲ್ಲಿ ಶ್ರೀಸಾಮಾನ್ಯ ಮನುಷ್ಯರಂತೆ ಜೀವಿಸಿದರು. ನಮಗಾಗಿ ತಮ್ಮ ಅಮೂಲ್ಯವಾದ ಜೀವವನ್ನು ತ್ಯಾಗ ಮಾಡಿ, ನಮಗಾಗಿ ಸದಾ ಕಾಲ ಪ್ರಾರ್ಥಿಸಿದರು. ಇಂದು ನಾವು ದೇವರೊಂದಿಗೆ ಬದುಕಲು ಕಲಿಯಬೇಕು ಎಂದರು.
Related Articles
Advertisement
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕ್ರಿಸ್ಮಸ್ ಈವ್ನ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ಮಂಗಳವಾರ ರಾತ್ರಿ ನೆರವೇರಿಸಿದರು. ಕ್ರಿಸ್ಮಸ್ ಬಲಿಪೂಜೆಯನ್ನು ನಂತೂರು ಬ್ರಿಜಿಟೈನ್ಸ್ ಧರ್ಮಭಗಿನಿಯರ ಕಾನ್ವೆಂಟ್ನಲ್ಲಿ ಮುಂಜಾನೆ ನಡೆಸಿದರು.
ಉಡುಪಿ ಧರ್ಮಾ ಧ್ಯಕ್ಷ ರೆ| ಫಾ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಮಂಗಳವಾರ ರಾತ್ರಿ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಹಬ್ಬದ ವಿಶೇಷ ಬಲಿಪೂಜೆ ಅರ್ಪಿಸಿ, ಬುಧವಾರ ಉಡುಪಿಯ ಬಿಷಪ್ ಹೌಸ್ನಲ್ಲಿ ಪ್ರಾರ್ಥನೆ ನೆರವೇರಿಸಿದರು.