ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 82.84 ಅಂಕಗಳ ಏರಿಕೆಯೊಂದಿಗೆ 27,117.34 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42.15 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,391.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಎನಿಸಿಕೊಂಡ ಶೇರುಗಳೆಂದರೆ ಗೇಲ್, ಎಚ್ ಡಿ ಎಫ್ ಸಿ, ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಟಾಟಾ ಸ್ಟೀಲ್; ಟಾಪ್ ಲೂಸರ್ ಎನಿಸಿಕೊಂಡ ಶೇರುಗಳೆಂದರೆ ಐಸಿಐಸಿಐ ಬ್ಯಾಂಕ್, ಲಾರ್ಸನ್, ಎಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಮತ್ತು ರಿಲಯನ್ಸ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,601 ಶೇರುಗಳು ಮುನ್ನಡೆ ಕಂಡವು. 1,142 ಶೇರುಗಳ ಹಿನ್ನೆಡೆಗೆ ಗುರಿಯಾದವು. 272 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಅಮೆರಿಕದಲ್ಲಿನ ಉದ್ಯೋಗಗಳ ಅಮೆರಿಕನ್ನರಿಗೆ ಸಲ್ಲಬೇಕು; ಮತ್ತು ಅಮೆರಿಕನ್ನರು ಅಮೆರಕನ್ ಉತ್ಪನ್ನಗಳನ್ನೇ ಬಳಸಬೇಕು ಎಂಬ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಗಳ ಬಗ್ಗೆ ಭಾರತ ಸಹಿತ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳು ಆತಂಕ ಹೊಂದಿರುವ ಹಿನ್ನೆಲೆಯಲ್ಲಿ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ವಿಪರೀತ ಏರು ಪೇರುಗಳು ಕಂಡುಬರಲಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.